ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ : 2 ಸಿಆರ್ಪಿಎಫ್ ಅಧಿಕಾರಿಗಳು ಸಸ್ಪೆಂಡ್

ಸಾಂದರ್ಭಿಕ ಚಿತ್ರ

 ರಾಯಪುರ್ : ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ  ಇತ್ತೀಚೆಗೆ ರಕ್ಷಾ ಬಂಧನದ ಸಂಬಂಧ ಸರಕಾರಿ ವಸತಿ ಶಾಲೆಯೊಂದರಲ್ಲಿ ನಡೆಯಬೇಕಿದ್ದ ಸಾಂಸ್ಕøತಿಕ ಕಾರ್ಯಕ್ರಮದ ಮುನ್ನ ವಿದ್ಯಾರ್ಥಿನಿಯರ ಮೇಲೆ ಇಬ್ಬರು ಸಿಆರ್ಪಿಎಫ್ ಅಧಿಕಾರಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆನ್ನಲಾದ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಆರೋಪಿ ಅಧಿಕಾರಿಗಳನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ. ಘಟನೆ ಜುಲೈ 31ರಂದು ನಡೆದಿತ್ತು.

ಅಧಿಕಾರಿಗಳ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತ ಐದು ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ.