ವಿದ್ಯುತ್ ಆಘಾತ : ಇಬ್ಬರು ಗಂಭೀರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಪಟ್ಟಣದ ಮೆಸ್ಕಾಂ ಕಚೇರಿ ಎದುರೇ ಇರುವ ವಿದ್ಯುತ್ ಬ್ಯಾಂಕ್ ಲೈನ್ ಆಫ್ ಮಾಡದೆ ತಂತಿ ಸ್ಪರ್ಶಿಸಿದ ಪರಿಣಾಮ ಇಬ್ಬರು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಆಘಾತದಿಂದ ಗಂಭೀರ ಸುಟ್ಟ ಗಾಯಗೊಂಡಿದ್ದಾರೆ.

ವೆಂಕಟೇಶ್ (24), ಹರೀಶ್ವರ್ (43) ವಿದ್ಯುತ್ ಆಘಾತದಿಂದ ಗಂಭೀರ ಗಾಯಗೊಂಡ ಮೆಸ್ಕಾಂ ನೌಕರರಾಗಿದ್ದಾರೆ. ಗಾಯಗೊಂಡ ಇಬ್ಬರಿಗೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿಗೆ ಸಾಗಿಸಲಾಗಿದೆ.