ವಿದ್ಯುತ್ ತಂತಿ ತಗುಲಿ 2 ಜಾನುವಾರು ಮೃತ

ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ತಾಲೂಕಿನ ಬೆಡಸಗಾಂವ ಗ್ರಾಮದಲ್ಲಿ ಸೋಮವಾರ ವಿದ್ಯುತ್ ತಂತಿ ತಗುಲಿ 2 ಜಾನುವಾರು ಸಾವನ್ನಪ್ಪಿವೆ.

ಇಲ್ಲಿನ ನಿವಾಸಿ ಪರಮೇಶ್ವರ ಚೌಡಪ್ಪ ನಾಯ್ಕರಿಗೆ ಸೇರಿದ ಜಾನುವಾರು ಇದಾಗಿದೆ. ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 2 ಜಾನುವಾರು ಸಾವನ್ನಪ್ಪಿದೆ ಎನ್ನಲಾಗಿದೆ. ಈ ಘಟನೆಯಿಂದ ಸುಮಾರು 60,000 ರೂ ಹಾನಿಯಾಗಿದೆ. ಕಳೆದ ವರ್ಷ ಇದೇ ಮಾಲಕಗೆ ಸೇರಿದ ಜಾನುವಾರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿತು ಎಂದು ತಿಳಿದುಬಂದಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಜಾನುವಾರುಗಳು ಸಾಯಲು ಹೆಸ್ಕಾಂನವರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.