ಇಂಗ್ಲೆಂಡ್ ಕ್ಯಾಬಿನೆಟ್ ಕಚೇರಿಯಲ್ಲಿ ಇಲಿ ಕಾಟ ಹತ್ತಿಕ್ಕಲು 2 ಬೆಕ್ಕು ನೇಮಕ

  ಲಂಡನ್ :  ಇಂಗ್ಲೆಂಡಿನ ಕ್ಯಾಬಿನೆಟ್ ಕಚೇರಿಯಲ್ಲಿ ಇಲಿಗಳ ಕಾಟ ಹೇಳತೀರದಾಗಿದೆ. ಇದೀಗ ಈ ಇಲಿಗಳನ್ನು ಕೊನಗಾಣಿಸಲು ಇನ್ನೆರಡು ಬೆಕ್ಕುಗಳನ್ನು  ತರಿಸಲಾಗಿದೆ. ಎವೀ ಮತ್ತು ಒಸ್ಸೀ ಎಂಬ  ಹೆಸರಿನ ಈ ತಾಯಿ-ಮಗನ ಬೆಕ್ಕಿನ ಜೋಡಿ ಕಪ್ಪು ಬಿಳುಪು ಬಣ್ಣದ್ದಾಗಿದೆ. ಈ ವಾರ ಕ್ಯಾಬಿನೆಟ್ ಕಚೇರಿಯ ಶತಮಾನೋತ್ಸವಕ್ಕೆ ಸರಿಯಾಗಿ ಈ ಎರಡು ಬೆಕ್ಕುಗಳ ಆಗಮನವಾಗಿರುವುದು ವಿಶೇಷವಾಗಿದೆ.

ಈ ಎರಡೂ ಬೆಕ್ಕುಗಳನ್ನು ಸೆಲಿಯಾ ಹಾಮ್ಮಂಡ್ ಎನಿವiಲ್ ಟ್ರಸ್ಟ್ ಕೆಲ ದಿನಗಳ ಹಿಂದೆ ಎಲ್ಲಿಂದಲೋ ರಕ್ಷಿಸಿ ಕರೆತಂದಿತ್ತು.