ಕಾರ್ನಾಡು ಬೈಪಾಸಲ್ಲಿ ಕಾರುಗಳ ಅಪಘಾತ

ನಮ್ಮ ಪ್ರತಿನಿಧಿ ವರದಿ

ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾದರು.

14car1

ಅಫಘಾತದ ರಭಸಕ್ಕೆ ಕಾರು ಹೆದ್ದಾರಿಯ ತೀರಾ ಎಡಭಾಗಕ್ಕೆ ಚಲಿಸಿ ಹೆದ್ದಾರಿಯ ಮೈಲುಗಲ್ಲಿಗೆ ಡಿಕ್ಕಿ ಹೊಡೆದಿದೆ. ವ್ಯಾಗನರ್ ಕಾರಿನಲ್ಲಿ ಭದ್ರಾವತಿ ಮೂಲದ ಸುಭಾಷ್ ಕುಟುಂಬ ಪ್ರಯಾಣಿಸುತ್ತಿದ್ದು ಪವಾಡಸದೃಶ ಪಾರಾಗಿದ್ದಾರೆ. ಆಸ್ಟಾ ಕಾರಿನಲ್ಲಿದ್ದ ಚಾಲಕ ಕಾರ್ನಾಡು ಮೂಲದ ರಜಾಕ್ ಕೂಡ ಅಪಾಯದಿಂದ ಪಾರಾಗಿದ್ದಾರೆ.