ಕರ್ನಾಟಕ ನಿವಾಸಿಯ ಕೊಲೆ : ಇಬ್ಬರು ಸಹೋದರರ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮೂರು ತಿಂಗಳ ಹಿಂದೆ ಚೆರ್ಕಳದಲ್ಲಿ ಕರ್ನಾಟಕ ನಿವಾಸಿಯಾದ ಕಾರ್ಮಿಕನೊಬ್ಬನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನಿವಾಸಿಗಳಾದ ಇಬ್ಬರನ್ನು ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿಯ ವಿಶೇಷ ಪಡೆ ಬಂಧಿಸಿದೆ.

ಬೆಳಗಾವಿ ಸೂರಂಬಾಲ್ ಗ್ರಾಮದ ಅಕಂಡಪ್ಪ (30), ಸಹೋದರ ವಿಟ್ಟಲ (33) ಬಂಧಿತ ಆರೋಪಿಗಳು. ಕರ್ನಾಟಕ ಬಾಗಲಕೋಟೆ ಜಿಲ್ಲೆಯ ಬೈರಪ್ಪ ಎಂಬವರ ಪುತ್ರ ರಂಗಪ್ಪ(27)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ.

ಆಗಸ್ಟ್ 9ರ ಬೆಳಿಗ್ಗೆ ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಬದಿಗಿರುವ ನಿರ್ಜನ ಪ್ರದೇಶದಲ್ಲಿ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಕಂಡ ಪಂಚಾಯತಿ ಸದಸ್ಯನೊಬ್ಬ ವಿದ್ಯಾನಗರ ಪೆÇಲೀಸರಿಗೆ ಕರೆ ಮಾಡಿದ್ದರು. ಬಳಿಕ ಪೆÇಲೀಸರು ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವದ ಬಳಿ ಲಭಿಸಿದ ಪರ್ಸನ್ನು ನೋಡಿ ಅದರ ವಿಳಾಸಕ್ಕೆ ಕರೆ ಮಾಡಿ ಸಂಬಂಧಿಕರನ್ನು ಕರೆಸಿ ಶವವನ್ನು ಬಿಟ್ಟು ಕೊಟ್ಟು ತನಿಖೆಯನ್ನು ಮುಂದುವರಿಸಲಾಗಿತ್ತು.