ಲಾಡ್ಜ್ ಮಾಲಕಗೆ ವಂಚನೆ ಇಬ್ಬರ ವಿರುದ್ಧ ಕೇಸು

?

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಗರದ ಹಳೆ ಬಸ್ ನಿಲ್ದಾಣದ ಎಮಿರೇಟ್ಸ್ ರೀಜೆನ್ಸಿ ಲಾಡ್ಜ್ ಮಾಲಕ ಆಲಂಪಾಡಿ ನಿವಾಸಿ ಮುಹಮ್ಮದಲಿ ಅವರ 3.25 ಲಕ್ಷ ರೂ ಮತ್ತು ಹೊಸ ಇನ್ನೋವಾ ಕಾರಿನೊಂದಿಗೆ ಇಬ್ಬರು ತಲೆಮರೆಸಿಕೊಂಡಿರುವುದಾಗಿ ಪೂಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ವಿದ್ಯಾನಗರ ಐಟಿಐ ರೋಡ್ ಕ್ಯಾಲಿಕಟ್ ಹೌಸ್ ಮುಹಮ್ಮದ್ ಶೈಜಾರ್ ಬಜಸಾರ್ ಸುಹೈಲ್ ಮತ್ತು ಈತನ ಸ್ನೇಹಿತ ಉಬೈದುಲ್ಲಾ ವಿರುದ್ಧ ಪೂಲೀಸರು ಕೇಸು ದಾಖಲಿಸಿದ್ದಾರೆ.
2016 ನವೆಂಬರ್ 23ರಂದು ಬೆಳಗ್ಗೆ ಲಾಡ್ಜ್ ಪಡೆದು ಬಳಿಕ ಮುಹಮ್ಮದಲಿ ಅವರೊಂದಿಗೆ ಪರಿಚಯ ಮಾಡಿಕೊಂಡು ಹಣ ಮತ್ತು ಕಾರಿನೊಂದಿಗೆ ಪರಾರಿಯಾಗಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.