ಅಪಘಾತದಲ್ಲಿ ಬೈಕ್ ಸವಾರಿಬ್ಬರು ಗಾಯ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಬೈಕ್ ಮತ್ತು ಜೀಪು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ  ಘಟನೆ  ಉಪ್ಪಿನಂಗಡಿಯ ಹೆದ್ದಾರಿ ಜಂಕ್ಷನ್ನಿನಲ್ಲಿ ನಡೆದಿದೆ. ಗಾಯಾಳು ಬೈಕ್ ಸವಾರರನ್ನು ವಿಟ್ಲ ಕೇಪುವಿನ ನಿವಾಸಿ  ದಿನೇಶ್ ಹಾಗೂ ಆರ್ಯಾಪು ನಿವಾಸಿ ರಘು ಎಂದು ಗುರುತಿಸಲಾಗಿದೆ. ಗಾಯಾಳು ದಿನೇಶ್ ಕಾಲು ಮುರಿತಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಅಡಿಕೆ ಮೂಟೆ ಬಿದ್ದು ಗಾಯ

ಉಪ್ಪಿನಂಗಡಿ : ಇಲ್ಲಿನ ರಾಜಧಾನಿ ಟವರನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಸ್ ಸಹಕಾರಿ ಸಂಸ್ಥೆಯ ಅಡಿಕೆ ಸ್ವೀಕಾರ ಕೇಂದ್ರದಲ್ಲಿ ಜೋಡಿಸಿಟ್ಟ ಅಡಿಕೆ ತುಂಬಿದ ಮೂಟೆಗಳು ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಬಿದ್ದ ಪರಿಣಾಮ ಸಿಬ್ಬಂದಿ ವೆಂಕಪ್ಪ ಗೌಡ (40) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.ಘಟನೆಯಿಂದ ಕಾಲಿನ ಮೂಳೆ ಮುರಿತವುಂಟಾಗಿದ್ದು, ಗಾಯಾಳು ವೆಂಕಪ್ಪ ಗೌಡರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.