ಚೆರ್ಕಳ ಇರಿತ ಪ್ರಕರಣ, ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆರ್ಕಳ ಪರಿಸರದಲ್ಲಿ ಈ ತಿಂಗಳ 20ರಂದು ರಾತ್ರಿ ಉಂಟಾದ ಘರ್ಷಣೆಗೆ ಸಂಬಂಧಿಸಿ ನೌಫಲ್ ಎಂಬಾತನನ್ನು ಇರಿದು ಗಾಯಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.

ಎದುರ್ತೋಡು ಕನ್ನಟಿಪರೆ ನಿವಾಸಿ ಎಂ ಎ ಸಹದ್ (19) ಹಾಗೂ ಸೂರ್ಲು ರಾಮದಾಸನಗರ ನಿವಾಸಿ ಎಸ್ ಕೆ ಅನೀಸ್ (23) ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗಳನ್ನು ಹತ್ಯೆ ಯತ್ನ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಕೆರೆಯಲ್ಲಿ ಸ್ನಾನ ಮಾಡುವ ವಿಷಯದಲ್ಲಿ ಘರ್ಷಣೆ ಉಂಟಾಗಿತ್ತು. ಇದೀಗ ಸೆರೆಗೀಡಾದ ಆರೋಪಿಗಳ ವಿರುದ್ದ ಈ ಮೊದಲು ಹಲವು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.