ಕಾರಿನಲ್ಲಿದ್ದ ಚೈನ್, ನಗದು ಕಳವುಗೈದ ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಹೊಸ ಕೆಎಚ್ಬಿ ಕಾಲೊನಿ ಬಳಿ ಕಾರಿನಲ್ಲಿಟ್ಟಿದ್ದ 1.16 ಲಕ್ಷ ರೂ ಮೊತ್ತದ ಚೈನ್, 2 ಲಕ್ಷ ರೂ ನಗದು ಕಳವು ಮಾಡಿದ್ದ ಇಬ್ಬರನ್ನು ಮಂಗಳವಾರ ಶಿರಸಿ ಪೊಲೀಸರು ಬಂಧಿಸಿ, ಮಾಲು ವಶಪಡಿಸಿಕೊಂಡಿದ್ದಾರೆ.

ಪ್ರಶಾಂತ ಶೇಟ ಎನ್ನುವವರು ತಮ್ಮ ಮನೆಯ ಆವರಣದಲ್ಲಿದ್ದ ಕಾರಿನಲ್ಲಿಟ್ಟ 1.16 ಲಕ್ಷ ರೂ ಮೌಲ್ಯದ 40 ಗ್ರಾಂ ಬಂಗಾರದ ಚೈನ್, 2 ಲಕ್ಷ ರೂ ನಗದನ್ನು ಕಳ್ಳರು ಕದ್ದು ಹೋಗಿರುವುದಾಗಿ ಸೆಪ್ಟೆಂಬರ್ 8ರಂದು ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಶಿರಸಿಯ ಹಂಚಿನಕೇರಿಯ ಆಸ್ಕರ ಆಲಿ ಹಾಗೂ ಕಸ್ತೂರಬಾನಗರದ ಗಣೇಶ ಬೊಂಗಾಳೆ ಅವರನ್ನು ಬಂಧಿಸಿ, 1.16 ಲಕ್ಷ ರೂ ಬಂಗಾರ ಹಾಗೂ 71,000 ರೂ ನಗದನ್ನು ವಶಪಡಿಸಿಕೊಂಡಿದೆ.