14,120 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ವಶ : ಇಬ್ಬರ ಸೆರೆ, ಬೈಕ್ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವ್ಯಾಪಾರಿಯೊಬ್ಬನ ಮನೆಗೆ ಪೆÇಲೀಸರು ದಾಳಿ ನಡೆಸಿ 14,120 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವ್ಯಾಪಾರಿ ಸಹಿತ ಇಬ್ಬರನ್ನು ಸೆರೆಹಿಡಿಯಲಾಗಿದ್ದು, ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬೈಕಿನಲ್ಲಿ ತಂಬಾಕು ಉತ್ಪನ್ನಗಳ ಸಾಗಾಟ ನಡೆಯುತ್ತಿದೆಯೆಂಬ ಗುಪ್ತ ಮಾಹಿತಿಯಂತೆ ಬುಧವಾರ ಪೆÇಲೀಸರು ಮಫ್ತಿಯಲ್ಲಿ ಕಾದು ನಿಂತಿದ್ದರು. ಪೆÇಲೀಸರನ್ನು ಕಂಡು ಹಲವು ಕಡೆ ಸುತ್ತಾಡಿದ ಬೈಕ್ ಸವಾರ ಬದಿಯಡ್ಕ ಮೇಲಿನ ಪೇಟೆಯ ಸರಕಾರಿ ಆಸ್ಪತ್ರೆ ರಸ್ತೆಯ ಬದಿಯಲ್ಲಿದ್ದ ಮನೆಗೆ ಹೋಗಿ ಅಲ್ಲಿ ಒಂದು ಗೋಣಿ ಪಾನ್ ಮಸಾಲೆ ಬಚ್ಚಿಟ್ಟು ಪರಾರಿಯಾದನು. ಪೆÇಲೀಸರು ಕೂಡಲೇ ಈ ಮನೆಗೆ ದಾಳಿ ನಡೆಸಿ ಪರಿಶೀಲಿಸಿದಾಗ 5 ಗೋಣಿ ತಂಬಾಕು ಉತ್ಪನ್ನಗಳು ಲಭಿಸಿದೆ.

13,640 ಮಾರುತಿ ಹಾಗೂ 480 ಮಧು ಪ್ಯಾಕೆಟುಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ಮನೆಯ ಮಾಲಕ, ಬದಿಯಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿ ವ್ಯಾಪಾರಿಯಾಗಿರುವ ಪಿ ಕೆ ಅಬ್ದುಲ್ಲ (55), ಈತನ ನೌಕರ, ಬೈಕ್ ಸವಾರ ಕೋಳಾರಿ ನಿವಾಸಿ ಕರೀಂ (31) ಎಂಬವರನ್ನು ಬಂಧಿಸಲಾಗಿದೆ. ವಶಪಡಿಸಿದ ಪಾನ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸುಮಾರು 1 ಲಕ್ಷ ರೂ ಬೆಲೆಯಿದೆಯೆಂದು ಪೆÇಲೀಸರು ತಿಳಿಸಿದ್ದಾರೆ.