ಕಾಡುಕುರಿ ಕೊಂದ ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಊರತೋಟ ಮುಂಡಿಗೆಜಡ್ಡಿ ಸಮೀಪ ಅಕ್ರಮವಾಗಿ ಕಾಡುಕುರಿ ಕೊಂದು ಮಾಂಸ ಸಂಗ್ರಹಿಸಿದ್ದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಮಂಜುನಾಥ ಪಟಗಾರ, ಗಂಗಾಧರ ನಾಯ್ಕ ಎಂಬವರನ್ನು ಬಂಧಿಸಲಾಗಿದ್ದು, ಗೌರೀಶ, ಮಂಜು ನಾಯ್ಕ ನಾಪತ್ತೆಯಾಗಿದ್ದಾರೆ. ವಲಯ ಅರಣ್ಯ ಅಧಿಕಾರಿ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿ, 1.6 ಕೇಜಿ ಹಸಿ ಮಾಂಸ, 5.5 ಕೇಜಿ ಬೇಯಿಸಿದ ಮಾಂಸ, ಒಂದು ನಾಡಬಂದೂಕು, ಮೂರು ಕತ್ತಿ, ಅಲ್ಯೂಮಿನಿಯಂ ಪಾತ್ರೆ 2, ಸ್ಟೀಲ್ ಪಾತ್ರೆ 3 ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಶಿರಸಿ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.