ಬಸ್ಸಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲೀಟರ್ ಮದ್ಯ ಸಹಿತ ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಜತ್ತೂರಿನಲ್ಲಿ ಅಬಕಾರಿ ತಂಡ ಬುಧವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ಎರಡೂವರೆ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿದೆ.

ವಶಪಡಿಸಿದ ಮಾಲಿನಲ್ಲಿ 180 ಎಂಎಲ್ 6 ಬಾಟಲಿ ಮದ್ಯ ಒಳಗೊಂಡಿತ್ತು. ಈ ಸಂಬಂಧ ತಳಿಪರಂಬ ಕೊಟ್ಟುಮುಖಂ ನಿವಾಸಿ ಥೋಮಸ್ ಜೋಸೆಫ(54)ನನ್ನು ಬಂಧಿಸಲಾಗಿದೆ.