ಅಕ್ರಮವಾಗಿ ಗೋವಾ ಮದ್ಯ ಸಾಗಾಟ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಶುಕ್ರವಾರ ಮಾರುತಿ ಕಾರಿನಲ್ಲಿ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವಾಗ ದಾಳಿ ನಡೆಸಿದ ಮಲ್ಲಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  ಗೋಪಿಶಿಟ್ಟಾದ ಗೋಪಿಚಂದ ಪಡವಳ್ಕರ್ ಮತ್ತು ಶಿರವಾಡದ ವಿನಾಯಕ ಕಡವಾಡಕರ್ ಬಂಧಿತರು. ಇವರಿಬ್ಬರು ಕಾರಿನಲ್ಲಿ ಅಕ್ರಮ ಗೋವಾ ಮದ್ಯವನ್ನು ಕಾರವಾರದಿಂದ ಮಲ್ಲಾಪುರಕ್ಕೆ ಸಾಗಿಸುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 33,600 ರೂ ಮೌಲ್ಯದ ಗೋವಾ ಮದ್ಯದ ಜೊತೆಗೆ ಕಳ್ಳಸಾಗಾಣಿಕೆಗೆ ಬಳಸಲಾದ ಕಾರನ್ನು ವಶಕ್ಕೆ ಪಡೆದು ಬಂಧಿತ ಆರೋಪಿಗಳ ವಿರುದ್ಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.