ಗಾಂಜಾ ಸೇವನೆ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ

ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಠಾಣಾ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಣಂಬೂರು ಗ್ರಾಮದ ತಣ್ಣೀರುಬಾವಿ ಜಿಎಂಆರ್ ಬಳಿಯಿರುವ ಮಾರ್ಷಲಿನ್ ಡಿ’ಸೋಜಾ ಅವರ ಚೈನೀಸ್ ಹೋಟೆಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಯುವಕನೊಬ್ಬ ಮುಂಜಾನೆ 7 ಗಂಟೆ ಸುಮಾರಿಗೆ ನಶೆ ಏರಿಸಿ ಕುಳಿತುಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ದಾಳಿ ನಡೆಸಿ ಯುವಕನನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ತನ್ನ ಹೆಸರು ರಾಧೇಶ್ಯಾಂ ಎಂದು ಹೇಳಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಎಎಸ್‍ಐ ಪುರಂದರ ಗೌಡ ಅವರು ಕಸಬಾ ಬೆಂಗರೆ ಭಾರತ್ ಶಿಪ್ ಯಾರ್ಡ್ ಬಳಿ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪಿ ಸನತ್ ಎಂಬಾತನನ್ನು ಬಂಧಿಸಿದ್ದಾರೆ.ಇಬ್ಬರೂ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ಮಾರಾಟ :  10 ಮಂದಿ ಬಂಧನ

ಮಂಗಳೂರು : ಕಾಲೇಜಿನ ಕ್ಯಾಂಪಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗಾಂಜಾ ಸೇವನೆ ನಿರತರಾಗಿದ್ದ ಒಟ್ಟು 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಕೊಲೆ ಪ್ರಕರಣದ ಆರೋಪಿಯೂ ಬಂಧಿಸಲ್ಪಟ್ಟಿದ್ದಾನೆ.

ಬೊಂದೇಲ್ ಬಳಿ ಇರುವ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ 8 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಇವರ ಬಳಿ ಇದ್ದ 600 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.