ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬರ್ಕೆ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಪರಾರಿಯಾಗಿದ್ದಾನೆ.

ಸಾಯಿಬಿನ್ ಕಾಂಪ್ಲೆಕ್ಸ್ ಬಳಿ ಮೂವರು ಯುವಕರು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿಯಂತೆ ದಾಳಿ ನಡೆಸಿದಾಗ ಆರೋಪಿಗಳಾದ ರಾಕೇಶ್ (20) ಮತ್ತು ರಾಘವೇಂದ್ರ (19)ರನ್ನು ಬಂಧಿಸಲಾಗಿದೆ.

ಬಿರಿಯಾನಿ ಟೋಲ್ ಗೇಟ್ ಬಳಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು ಇನ್ನೊಬ್ಬ ಆರೋಪಿ ವಿಶ್ವಕಿರಣ ಯಾನೆ ಬ್ಲಾಕಿ ಎಂಬಾತನು ಪರಾರಿಯಾಗಿದ್ದಾನೆ. ಅವರಲ್ಲಿದ್ದ ಸುಮಾರು 125 ಗ್ರಾಂ ಗಾಂಜಾ ಮಾದಕ ವಸ್ತುವನ್ನು ಮತ್ತು ಒಂದು ಸ್ಯಾಮ್‍ಸಂಗ್ ಮೊಬೈಲ್ ಪೆÇೀನ್ ವಶಕ್ಕೆ ತೆಗೆದುಕೊಳ್ಳಲಾಗಿದೆ