ಕೊಣಾಜೆ ಪೇದೆಗೆ ಹಲ್ಲೆಗೈದ ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಣಾಜೆ ಠಾಣಾ ಪೇದೆ ಆದರ್ಶ್ ಕೆನ್ನೆಗೆ ಹಲ್ಲೆಗೈದ ಆರೋಪಿ ಸೇರಿದಂತೆ ಇಬ್ಬರನ್ನು ಉರ್ವ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದು, ಇದೇ ಆರೋಪಿಗಳು ಉರ್ವ ಎ ಎಸ್ ಐ ಐತಪ್ಪರಿಗೂ ಹಲ್ಲೆ ನಡೆಸಿರುವುದು ತನಿಖೆಯಿಂದ ಖಚಿತಪಟ್ಟಿದೆ.

ಸುರತ್ಕಲ್ ಕಾಟಿಪಳ್ಳದ ಶಮೀರ್ (28) ಮತ್ತು ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಝ್ (20) ಐತಪ್ಪರ ಮೇಲೆ ಹಲ್ಲೆ ನಡೆಸಿದ ಬಂಧಿತರು. ಕೊಣಾಜೆಯಲ್ಲಿ ಪೇದೆ ಆದರ್ಶಗೆ ಹಲ್ಲೆ ನಡೆಸಿದ ಬಳಿಕ ಮಂಗಳೂರಿಗೆ ತೆರಳಿದ ಆರೋಪಿಗಳು ಅಲ್ಲಿ ಕರ್ತವ್ಯ ನಿರತರಾಗಿದ್ದ ಎ ಎಸ್ ಐ ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದರು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಯಮಹಾ ಆರ್ 15ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪಿ ಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆಯಿಂದ ಆಕ್ರೋಶಗೊಂಡಿದ್ದ ಇಬ್ಬರೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.