ಆರೋಪಿಯ ಹಿಡಿಯಲು ಹೋದ ಪೆÇಲೀಸರಿಗೆ ತಂಡ ಹಲ್ಲೆಯತ್ನ

ಬಂಧಿತ ಆರೋಪಿಗಳು

ಇಬ್ಬರ ಬಂಧನ, 25 ಮಂದಿ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಬಳೆ ಠಾಣೆಯ ಪ್ರಕರಣವೊಂದರ ಆರೋಪಿಯನ್ನು ಹಿಡಿಯಲು ತೆರಳಿದ ಮಂಜೇಶ್ವರ ಎಸೈ ಹಾಗೂ ಮೂವರು ಪೆÇಲೀಸರಿಗೆ ತಂಡವೊಂದು ಕರ್ತವ್ಯಕ್ಕೆ ಅಡ್ದಪಡಿಸಿ ಹಲ್ಲೆಗೆ ಯತ್ನಿಸಿರುವುದಾಗಿ ದೂರಲಾಗಿದೆ.

ಈ ಸಂಬಂಧ ಇಬ್ಬರನ್ನು ಬಂಧಿಸಿ 25 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಆನೆಕಲ್ಲು ನಿವಾಸಿಗಳಾದ ಅಬ್ದುಲ್ ಮಜೀದ್ (36) ಹಾಗೂ ಆಹ್ಮದ್ ಬಾತಿಷ್ (23) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೆÇಲೀಸರು ಶೋಧ ಆರಂಭಿಸಿದ್ದಾರೆ.

ಆರೋಪಿ ಕುರುಡ ಪದವು ನಿವಾಸಿ ಅಲಿ ಎಂಬಾತ ಕುಂಬಳೆ ಠಾಣೆಯ ಪ್ರಕರಣವೊಂದರಲ್ಲಿ ಪೆÇಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈತ ಮನೆಯಲ್ಲಿರುವ ಖಚಿತ ಮಾಹಿತಿಯಂತೆ ಆತನನ್ನು ಹಿಡಿಯಲು ಖಾಸಗಿ ವಾಹನದಲ್ಲಿ ಭಿನ್ನವೇಷದಲ್ಲಿ ಅಲ್ಲಿಗೆ ತೆರಳಿದ ಪೆÇಲೀಸರನ್ನು ಕಂಡು ಆರೋಪಿ ಪರಾರಿಯಾಗಿದ್ದಾನೆ. ಇದರಂತೆ ಪೆÇಲೀಸರು ವಾಪಾಸಾಗುತ್ತಿರುವ ದಾರಿ ಮಧ್ಯೆ ಮಜೀರ್ಪಳ್ಳ ಎಂಬಲ್ಲಿ ಪೆÇಲೀಸರ ವಾಹನವನ್ನು ಹಿಂಬಾಲಿಸಿ ಬಂದ ಬೈಕ್ ಹಾಗೂ ಒಂದು ಕಾರು ಪೆÇಲೀಸರ ವಾಹನಕ್ಕೆ ತಡೆಯೊಡ್ಡಿದೆ. ಮಾತ್ರವಲ್ಲದೆ ಮಜೀರ್ಪಳ್ಳ ಎಂಬಲ್ಲಿ ಸುಮಾರು 25 ಜನ ಸೇರಿ ಪೆÇಲೀಸರನ್ನು ಹಲ್ಲೆಗೈಯಲು ಯತ್ನಿಸಿರುವುದಾಗಿ ದೂರಲಾಗಿದೆ.