ಅಕ್ರಮ ಗೋ ಸಾಗಾಟ ಪತ್ತೆ , ಇಬ್ಬರು ವಶಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕುದ್ರೋಳಿ ಶಾಲೆಯೊಂದರ ಬಳಿ ಬೆಂಗ್ರೆ ಮೊದಲಾದ ಕಡೆಗಳಿಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ 14 ಹಸುಗಳನ್ನು ಪೊಲೀಸರು ಮಂಗಳವಾರ ರಾತ್ರಿ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುದ್ರೋಳಿ ನಿವಾಸಿ ಅಬ್ದುಲ್ ಲತೀಫ್(39) ಮತ್ತು ಅಲ್ತಾಫ್(28) ಬಂಧಿತರು. ಬರ್ಕೆ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.