ಚಿನ್ನಾಭರಣ ಅಂಗಡಿಯಲ್ಲಿ ಕಳವಿಗೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಇಬ್ಬರ ಸೆರೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಇಲ್ಲಿನ ಉಜಿರೆ ಪೇಟೆಯಲ್ಲಿರುವ ದಮಾಸ್ ಹೆಸರಿನ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಕಳವು ನಡೆಸಲು ವಿಫಲ ಯತ್ನ ನಡೆಸಿದ್ದ ಆರೋಪಿಗಳಿಬ್ಬರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜೂನ್ 10ರಂದು ಈ ಕಳವು ಯತ್ನ ಪ್ರಕರಣ ನಡೆದಿತ್ತು.

ಮಧುಗಿರಿ ತುಮಕೂರು ಮೇಕೆ ಬಂಡೆಮನೆ ನಿವಾಸಿಗಳಾದ ಮಂಜುನಾಥ ಯಾನೆ ಕೋಳಿ ಮಂಜ(49) ಹಾಗೂ ಮಹಾಂತೇಶ್ (21) ಬಂಧಿತ ಆರೋಪಿಗಳಾಗಿದ್ದಾರೆ. ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿ  ಆರೋಪಿಗಳಿಗೆ ಬಲೆ ಬೀಸಲಾಗಿತ್ತು.