ದೆಹಲಿಯಲ್ಲಿ ಪ್ರತಿದಿನ 16 ಜನರ ಅಪಹರಣ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿದಿನ 16 ಜನ ಅಪಹರಣವಾಗುತ್ತಿದ್ದು, ನವೆಂಬರ್ 15ರವರೆಗೆ ದೊರೆತ  ಅಂಕಿಅಂಶಗಳ ಪ್ರಕಾರ ಸುಮಾರು ಪಸಕ್ತ ವರ್ಷದಲ್ಲಿ ನವೆಂಬರ್ 15ರವರೆಗೆ 5,920 ಅಪಹರಣಗೊಂಡಿರುವ  ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಮಾಹಿತಿ ರಾಜ್ಯಸಭೆಯಲ್ಲಿ ಹೊರಬಿದ್ದಿದ್ದು, ಕೆಲವು ಅಪಹರಣ ಸಂತ್ರಸ್ತರನ್ನು ವಿಚಾರಣೆ ನಡೆಸಿದಾಗ ಹಣಕ್ಕಾಗಿ ಅಪಹರಣ ಮತ್ತು ಮಾರಾಟ, ಬಾಲ ಕಾರ್ಮಿಕತೆಗೆ ಒತ್ತಡ, ವೇಶ್ಯಾವಾಟಿಕೆ, ವಿವಾಹ ಮತ್ತು ಲೈಂಗಿಕ ಶೋಷಣೆಗಳಿಗೆ ಬಳಸಿಕೊಂಡಿರುವುದು ತಿಳಿದುಬಂದಿದೆ.

ಈ ವರ್ಷ ದೆಹಲಿಯಲ್ಲಿ ಒಟ್ಟು 20,882 ಮಂದಿ ಕಳೆದುಹೋಗಿರುವ ಬಗ್ಗೆ ವರದಿಯಾಗಿದೆ.