154 ಟೆಂಟ್ ಮನೆ ತೆರವು

ಕಂದಾವರ : ಸರ್ಕಾರೀ ಭೂಮಿಯಲ್ಲಿ ಅಕ್ರಮ ಕಟ್ಟಡ ಆರೋಪ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕುಂದಾಪುರ ತಾಲೂಕಿನ ಕಂದಾವರ ಎಂಬಲ್ಲಿ 24 ಎಕ್ರೆ ಸರ್ಕಾರೀ ಜಮೀನಿನಲ್ಲಿ ಕಳೆದ ಸರ್ಕಾರೀ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಸುಮಾರು 154 ಮನೆಗಳನ್ನು ಪೊಲೀಸ್ ಭದ್ರತೆಯಲ್ಲಿ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

 ಕೆಲವು ತಿಂಗಳುಗಳ ಹಿಂದೆ ಗ್ರಾಮದಲ್ಲಿ ಕೆಲವರು ಟೆಂಟ್‍ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ ಈ ಬಗ್ಗೆ ಕಂದಾಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದನ್ನು ಗಮನಿಸಿದ್ದ Àಲವರು ಮತ್ತೆ ಅದೇ ಜಮೀನಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಲ್ಲದೇ ಹಾಲೋಬ್ಲಾಕ್ ಹಾಗೂ ಇಟ್ಟಿಗೆಗಳನ್ನು ತಂದು ಮನೆಗಳನ್ನು ಭದ್ರಗೊಳಿಸಿದ್ದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಸುಮಾರು 64 ಮಂದಿ ಗ್ರಾಮ ಕರಣಿಕರು ಹಾಗೂ ಗ್ರಾಮ ಸೇವಕರು, ತಹಸೀಲ್ದಾರರು ಸೇರಿದಂತೆ 200ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ಅಷ್ಟೂ ಗುಡಿಸಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಈ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.

ರಹಸ್ಯ ಕಾರ್ಯಾಚರಣೆ: ಮುಖ್ಯಮಂತ್ರಿಗಳು ಬರುವ ವೇಳಾಪಟ್ಟಿ ಇದ್ದ ಹಿನ್ನೆಲೆಯಲ್ಲಿ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಗುಡಿಸಲು ತೆರವು ಕಾರ್ಯಾಚರಣೆಯನ್ನು ವಿಳಂಬ ಮಾಡಲಾಗಿತ್ತು ಎನ್ನುವ ಮಾಹಿತಿಗಳು ಲಭಿಸಿದ್ದು, ಕೆಲವು ದಿನಗಳಿಂದ ಈ ಕಾರ್ಯಾಚರಣೆಗೆ ರೂಪು ರೇಷೆ ಸಿದ್ಧವಾಗಿತ್ತು ಎನ್ನಲಾಗಿದೆ. ಮಂಗಳವಾರ ರಾತ್ರಿಯೇ ಸ್ಥಳದಲ್ಲಿ ಪೊಲೀಸ್ ಜಮಾವಣೆಗೆ ಸಿದ್ಧತೆ ನಡೆಸಲಾಗಿದ್ದು, ಬುಧವಾರ ಕಂದಾವರ ಅಕ್ರಮ ಗುಡಿಸಲುಗಳು ಇರುವ ಸ್ಥಳಕ್ಕೆ ಬರುವ ರಸ್ತೆಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ನಿರ್ಮಿಸಲಾಗಿತ್ತು.

ಆರಂಭದಲ್ಲಿ ಗುಡುಸಲು ನಿರ್ಮಿಸಿಕೊಳ್ಳುವುದಕ್ಕೆ ಕೆಲವು ಸಂಘಟನೆಗಳು ಹಣ ಪಡೆದುಕೊಂಡಿದ್ದು, ಅಧಿಕಾರಿಗಳು ಗುಡಿಸಲು ತೆರವು ಕಾರ್ಯಾಚರಣೆಗೆ ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದ ಕೆಲವು ಸಂಘಟನೆಗಳ ಮುಖಂಡರು ತೆರವು ಕಾರ್ಯಾಚರಣೆ ಸಂದರ್ಭ ಬೆಂಬಲಕ್ಕೆ ನಿಂತಿಲ್ಲ ಎಂಬುದಾಗಿ ಕೆಲವರು ನೊಂದು ಮಾತನಾಡುತ್ತಿರುವುದು ಕಂಡು ಬಂದಿತು. ಕೊಟ್ಟ ಹಣವೂ ಹೋಯಿತು, ಕಟ್ಟಿದ ಮನೆಯೂ ಹೋಯಿತು ಎನ್ನುತ್ತಿದ್ದ ಕುಟುಂಬಗಳು ನಡುಬೀದಿಯಲ್ಲಿ ಸಂಘಟನೆಯ ಮುಖಂಡರಿಗೆ ಬೈದುಕೊಂಡರು.

LEAVE A REPLY