ಬಿಜೆಪಿ ನಾಯಕರ ಮೇಲೆ ಸಿಟ್ಟಾಗಿ 150 ಕಾರ್ಯಕರ್ತರು ಕಾಂಗ್ರೆಸ್ಸಿಗೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಉತ್ತಮ ಸ್ಥಾನ-ಮಾನ ನೀಡುವ ಮೂಲಕ ಪಕ್ಷದಲ್ಲೇ ಇದ್ದು, ಪಕ್ಷಕ್ಕಾಗಿ ದುಡಿದ ನಮ್ಮನ್ನು ಬೆಳ್ಮಣಿನ ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ ಎಂಬುದಾಗಿ, ಬಿಜೆಪಿ ವಾರ್ಡ್ ಕಾರ್ಯದರ್ಶಿ ಸುರೇಶ್ ಪೂಜಾರಿ ನೇತೃತ್ವದಲ್ಲಿ 150 ಮಂದಿ ಬಿಜೆಪಿ ಕಾರ್ಯಕರ್ತರು ಕುಲಾಲ ಭವನ ನಾನಿಲ್ ತಾರ್ ಸಭಾಂಗಣದಲ್ಲಿ

ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು.ಈ ಬಗ್ಗೆ ಮಾತನಾಡಿದ ಸುರೇಶ್ ಪೂಜಾರಿ, “ನಾವು ಬಹಳಷ್ಟು ಮಂದಿ ಕಳೆದ 16 ವರ್ಷಗಳಿಂದ ಬಿಜೆಪಿಯಲ್ಲೇ ಇದ್ದು ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದೇವು. ಕಳೆದ ಚುನಾವಣೆಯ ಬಳಿಕ ನಮ್ಮ ಬೆಳ್ಮಣ್ ಬಿಜೆಪಿ ಮುಖಂಡರು ಯಾವುದೇ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಯದೆ ಕಡೆಗಣಿಸುತ್ತಿದ್ದು, ಇದೀಗ ಬೇರೆ ಪಕ್ಷಗಳಿಂದ ವಲಸೆ ಬಂದವರಿಗೆ ಪಕ್ಷದಲ್ಲಿ ಸ್ಥಾನ-ಮಾನ ನೀಡುವ ಮೂಲಕ ನಮ್ಮನ್ನು ಅವಮಾನಿಸಿದ್ದು ಮಾತ್ರವಲ್ಲ ನಮಗೆ ಅನ್ಯಾಯ ಮಾಡಿದ್ದಾರೆ. ಇದರಿಂದ ಮನನೊಂದ ನಾನು ನಮ್ಮ 150 ಮಂದಿ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್, ವಿಶ್ವಾಸ್ ಅಮೀನ್ ಹಾಗೂ ದೀಪಕ್ ಕೋಟ್ಯಾನ್ ಇನ್ನಾ ಇವರ ನೇತೃತ್ವದಲ್ಲಿ ಕಾಂಗ್ರೆಸ್ಸಿಗೆ ಅದಿಕೃತವಾಗಿ ಸೇರ್ಪಡೆಗೊಂಡಿದ್ದೇವೆ” ಎಂದಿದ್ದಾರೆ.