ಶಿಕ್ಷಕಿಯ ಶಾಲಾ ಟಾಯ್ಲೆಟಿನಲ್ಲಿ ಕೂಡಿಹಾಕಿ ಸೆಕ್ಸ್ ಡಿಮಾಂಡ್ ಮಾಡಿದ 15 ವರ್ಷದ ವಿದ್ಯಾರ್ಥಿ

ನವದೆಹಲಿ : ದಿಲ್ಲಿ ಸರ್ಕಾರಿ ಶಾಲೆಯ 44 ವರ್ಷದ ಶಿಕ್ಷಕಿಯೊಬ್ಬರನ್ನು ಶಾಲೆಯ ವಾಶ್‍ರೂಮಿನಲ್ಲಿ 15 ನಿಮಿಷ ಕೂಡಿಹಾಕಿದ 15 ವರ್ಷದ ಅಪರಿಚಿತ ವಿದ್ಯಾರ್ಥಿಯೊಬ್ಬ, ಆಕೆಯ ಬಿಡುಗಡೆಗಾಗಿ `ಲೈಂಗಿಕ ಕ್ರಿಯೆ’ಗಾಗಿ ಒತ್ತಾಯಿಸಿದ ಘಟನೆ ಶಹದರ ಜಿಲ್ಲೆಯ ವಿವೇಕ್ ವಿಹಾರದಲ್ಲಿ ನಡೆದಿದೆ. “ಆಕೆ ಒಳಗಿರುವಾಗ ಹೊರಗಿನಿಂದ ಲಾಕ್ ಬಿದ್ದಿದ್ದು, ಹೊರಗೆ ಬರಲು ಆ ಶಿಕ್ಷಕಿ ಬೊಬ್ಬೆ ಹಾಕಿದ್ದಾರೆ. ಆರಂಭದಲ್ಲಿ ಬಾಗಿಲಿನ ಲಾಕ್ ತೆಗೆಯಲು ವಿದ್ಯಾರ್ಥಿಯಲ್ಲಿ ಮನವಿ ಮಾಡಿದರು. ಆದರೆ ಆತ ಆಕೆಗೆ ಬೈಯಲಾರಂಭಿಸಿದ. ಲಾಕ್ ತೆಗೆಯಬೇಕಿದ್ದರೆ ತನ್ನೊಂದಿಗೆ ಮಲಗಬೇಕೆಂದು ಹೇಳಿದ. ಆಗ ಶಿಕ್ಷಕಿ ಮತ್ತಷ್ಟು ಜೋರಾಗಿ ಬೊಬ್ಬೆ ಹಾಕಿದ್ದು, ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತಿದ್ದಾನೆ” ಎಂದು ಮೂಲಗಳು ಹೇಳಿವೆ. ಬಳಿಕ ಆಕೆಯನ್ನು ಶಾಲಾ ಸಿಬ್ಬಂದಿಯು ವಾಶ್‍ರೂಮಿನಿಂದ ಪಾರು ಮಾಡಿದ್ದು, ನಡೆದ ಘಟನೆಯನ್ನು ಪ್ರಾಂಶುಪಾಲರಲ್ಲಿ ತಿಳಿಸಿದ್ದಾರೆ. 300 ವಿದ್ಯಾರ್ಥಿಗಳ ಪರೇಡ್ ನಡೆಸಿದರೂ, ಶಿಕ್ಷಕಿಗೆ ಕಿರುಕುಳ ಕೊಟ್ಟಿರುವ ವಿದ್ಯಾರ್ಥಿ ಯಾರೆಂಬುದನ್ನು ಗುರುತಿಸಲು ಆಕೆ ವಿಫಲರಾಗಿದ್ದಾರೆಂದು ಪೊಲೀಸರು ತಿಳಿಸಿದರು.

sÀಲರಾಗಿದ್ದಾರೆಂದು ಪೊಲೀಸರು ತಿಳಿಸಿದರು.