ಟೆಂಪೋ ಪಲ್ಟಿ : 15 ಜನರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಕುಮಟಾ : ತಾಲೂಕಿನ ಗುಡ್ಕಾಗಾಲದ ದೇವಕಿಕೃಷ್ಣ ದೇವಸ್ಥಾನದ ಸಮೀಪದ ಮಾಸ್ತಿಕಟ್ಟಾ ಇಳಿಜಾರಿನಲ್ಲಿ ಸೋಮವಾರ ಮದುವೆ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಪರಿಣಾಮ ಟೆಂಪೊದಲ್ಲಿದ್ದ 15 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಘನಾಶಿನಿ ನಿವಾಸಿಗಳಾದ ಕಿರಣ ಜಟ್ಟು ಗೌಡ (18), ಈಶ್ವರ ದೇವು ಗೌಡ (35), ನಾಗೇಶ ಗೌಡ (29), ಬುಡ್ಡಾ ಗೌಡ (45), ಈಶ್ವರ ತುಳುಸು ಗೌಡ (65), ಕಾಮೇಶ್ವರ ಗೌಡ (30), ತಿಮ್ಮಪ್ಪ ಗೌಡ (40), ಹುಲಿಯಮ್ಮ ಗೌಡ (60), ವತ್ಸಲ ಗೌಡ (60), ಭಾವನಾ ಗೌಡ (8), ಮೋಹಿನಿ ಗೌಡ (11), ಅಮರ ಗೌಡ (13) ಸೇರಿದಂತೆ 15 ಜನರು ಗಂಭೀರವಾಗಿ ಗಾಯಗೊಂಡರೆ, 15 ಜನರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಕುಮಟಾದ ಮೂರುಕಟ್ಟೆಯಲ್ಲಿ ಕಾವೂರ ಕಾಮಾಕ್ಷಿ ಸಭಾಭವನದಲ್ಲಿ ನಡೆದ ವಿವಾಹ ಕಾರ್ಯಕ್ರಮ ಮುಗಿಸಿ ವಾಪಸ್ ಅಘನಾಶಿನಿಗೆ ತೆರಳುತ್ತಿರುವಾಗ ಅಘನಾಶಿನಿ ಘಟ್ಟದ ಬಳಿ ಟೆಂಪೋ ಇಂಜಿನ್ ಬಂದ್ ಬಿದ್ದಿದೆ. ಹಾಗಾಗಿ ಹಿಮ್ಮುಖವಾಗಿ ಚಲಿಸಿದ ಟೆಂಪೋ ಅಲ್ಲಿನ ಕಿರುಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟೆಂಪೊ ಪಲ್ಟಿಯಾಗಿ ಬಿದ್ದ ಸ್ಥಳದಲ್ಲಿ ಕಂದಕ ಇರುವುದರಿಂದ ಸಂಭವಿಸಬಹುದಾದ ಭಾರೀ ದುರಂತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಗಾಯಾಗೊಂಡವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತಕ್ಕೊಳಗಾಗಿದ್ದ ಟೆಂಪೆÇದಲ್ಲಿ ಒಟ್ಟೂ 30 ಪ್ರಯಾಣಿಕರಿದ್ದು, ಅಪಘಾತಪಡಿಸಿದ ಟೆಂಪೋ ಚಾಲಕ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಕುಮಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.