ಜೂಜು ಅಡ್ಡೆಗೆ ದಾಳಿ : 14 ಮಂದಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಒಟ್ಟು 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಪಂಪ್ವೆಲ್ ಲಕ್ಷ್ಮೀ ಆರ್ಕೇಡ್ ಕಟ್ಟಡದ ಎರಡನೇ ಮಹಡಿಯಲ್ಲಿ ನಡೆಯುವ ಜೂಜು ಅಡ್ಡೆ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರುದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಜೂಜಿಗೆ ಬಳಸಿಕೊಂಡಿದ್ದ ನಗದು ಹಣ 32,100 ರೂ ಹಾಗೂ ಜೂಜಾಟಕ್ಕೆ ಬಳಸಿದ ಪರಿಕರಗಳ ಸಹಿತ ಒಟ್ಟು 1,15,000 ರೂ ಮೊತ್ತದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಅಗತ್ಯ ಕ್ರಮಗಳಿಗಾಗಿ ಕೇಸನ್ನು ಕಂಕನಾಡಿ ನಗರದ ಪೊಲೀಸ್ ಠಾಣೆ ಹಸ್ತಾಂತರಿಸಲಾಗಿದೆ.