ನಾಗರಹಾವನ್ನು ನುಂಗಿದ 13 ಅಡಿ ಉದ್ದದ ಕಾಳಿಂಗ

ಶಿವಮೊಗ್ಗ : ಜಿಲ್ಲೆಯ ಹೊಸನಗರದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವೊಂದು ನಾಗರಹಾವನ್ನು ನುಂಗಿದ ಘಟನೆಯನ್ನು ಹಲವಾರು ಜನರು ಕೌತುಕದಿಂದ ವೀಕ್ಷಿಸಿದ್ದಾರೆ. ನಾಗರಹಾವನ್ನು ಬೆಂಬತ್ತಿದ್ದ ಕಾಳಿಂಗ ಸರ್ಪವು ಅದು ತನ್ನನ್ನು ಕಾಪಾಡಿಕೊಳ್ಳಲು ಪೊಠರೆಯೊಂದರೊಳಗೆ ನುಸುಳಿದ್ದರೂ ಅಲ್ಲಿಂದಲೂ ಅದನ್ನು ಹಿಡಿದೆಳೆದು ಹತ್ತು ನಿಮಿಷಗಳೊಳಗಾಗಿ ಅದನ್ನು ನುಂಗಿಯೇ ಬಿಟ್ಟಿತ್ತು.

ನಂತರ ಸ್ಥಳಕ್ಕಾಗಮಿಸಿದ ಉರಗ ತಜ್ಞರು ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅದನ್ನು ಪಕ್ಕದ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಿದರು.