ಇರಾನ್-ಇರಾಕ್ ಗಡಿಯಲ್ಲಿ ಭೂಕಂಪ : 13 ಮಂದಿ ಮೃತ

ಸುಲೈಮಾನಿಯಾ (ಇರಾಕ್): ಇರಾನ್-ಇರಾಕ್ ಗಡಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆಂದು ಎರಡೂ ರಾಷ್ಟ್ರಗಳ ಅಧಿಕಾರಿಗಳು ಮತ್ತು ಮಾಧ್ಯಮಗಳು ವರದಿ ಮಾಡಿವೆ. ಇರಾನಿನ ಈಶಾನ್ಯ ಗಡಿಗೆ ಹತ್ತಿರದಲ್ಲಿರುವ ಹಲಬ್ಜಾದಿಂದ 30 ಕಿ ಮೀ ದೂರದಲ್ಲಿ 7.3 ರಿಕ್ಟರ್ ಮಾಪನದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವಿಜ್ಞಾನ ಸರ್ವೆ ಹೇಳಿದೆ. ಸುಲೈಮಾನ್ ಪ್ರಾಂತ್ಯದಲ್ಲಿ ಆರು ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದರು. ಬಾಗ್ದಾದ್ ಹಾಗೂ ಸುತ್ತಲ ಪ್ರದೇಶಗಳಲ್ಲಿ 20 ಸೆಕಂಡ್ ಭೂಕಂಪದ ಅನುಭವವಾಗಿದೆ.