ಪುತ್ರಿ 600 ಬಾರಿ ರೇಪ್ ಮಾಡಿದ ತಂದೆಗೆ 12 ಸಾವಿರ ವರ್ಷ ಶಿಕ್ಷೆ ?

ಸಾಂದರ್ಭಿಕ ಚಿತ್ರ

ಕೌಲಾಲುಂಪುರ್ : ಹದಿನೈದು ವರ್ಷದ ಪುತ್ರಿಯ ಮೇಲೆ 600 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿರುವುದು ಸಾಬೀತಾದಲ್ಲಿ ಮಲೇಷ್ಯಾ ಮೂಲದ ಆರೋಪಿ 12 ಸಾವಿರ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.36 ವರ್ಷ ವಯಸ್ಸಿನ ವಿಚ್ಚೇದಿತ ಆರೋಪಿ ವಿರುದ್ಧ 626 ಆರೋಪಗಳನ್ನು ಓದಲು ನ್ಯಾಯಾಲಯದ ಅಧಿಕಾರಿಗಳು ಎರಡು ದಿನಗಳನ್ನು ತೆಗೆದುಕೊಂಡು ಇಂದು ಮಧ್ಯಾಹ್ನ ಅಂತ್ಯಗೊಳಿಸಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿಚಾರಣೆಗಾಗಿ ನೂತನವಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ಸರಕಾರಿ ವಕೀಲರು ವಾದ ಮಂಡಿಸಿ, ಆರೋಪಗಳು ಸಾಬೀತಾದಲ್ಲಿ ಆರೋಪಿ 12,000 ಸಾವಿರ ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

15 ವರ್ಷದ ಬಾಲಕಿಯ ಮೇಲೆ ಆರೋಪಿ ಎಸಗಿದ ಪ್ರತಿ ಬಾರಿಯ ಅತ್ಯಾಚಾರಕ್ಕೆ 20 ವರ್ಷಗಳ ಶಿಕ್ಷೆ ನಿಗದಿಪಡಿಸಲಾಗಿದ್ದು, ಅದರಂತೆ ಆರೋಪಿಯ  600 ಲೈಂಗಿಕ ದೌರ್ಜನ್ಯ ಅಪರಾಧಗಳಿಗೆ 12 ಸಾವಿರ ವರ್ಷ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ.