ನಿದ್ರೆಯಲ್ಲಿದ್ದ ಚಾಲಕ, ಸೇತುವೆಯಿಂದ ಕೆಳಗೆ ಬಿದ್ದ ಬಸ್, 11 ಮಂದಿ ಸಾವು

ವಿಜಯವಾಡ : ತೆಲುಗುದೇಶಂ ಶಾಸಕ ಜೆ ಸಿ ಪ್ರಭಾಕರ ರೆಡ್ಡಿಗೆ ಸಂಬಂಧಿಸಿದ ಬಸ್ಸೊಂದು ಸೇತುವೆಯಿಂದ ಕೆಳಗುರುಳಿದ ಭೀಕರ ಅಪಘಾತದಲ್ಲಿ 11 ಮಂದಿ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ. ಈ ಬಸ್ಸು ಹೆದ್ದಾರಿ ಸಂಖ್ಯೆ 65ರಲ್ಲಿ 110 ಕಿ ಮೀ ವೇಗದಲ್ಲಿ ಭುಭನೇಶ್ವರದಿಂದ ಹೈದರಾಬಾದಿಗೆ ಸಂಚರಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಬಸ್ಸಿನ ಚಾಲಕ ನಿದ್ರಿಸುತ್ತಿದ್ದುದೇ ಈ ದುರಂತಕ್ಕೆ ಕಾರಣವಾಗಿದೆ. ಕೃಷ್ಣ ಜಿಲ್ಲೆಯ ಪೆನುಗಂಚಿಪ್ರೋಲು ಮಂಡಲದ ಮಲ್ಲಪಡು ಎಂಬಲ್ಲಿ ನಿನ್ನೆ ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ತಿಳಿಸಿದರು.