ನೈಜೀರಿಯಾದಲ್ಲಿ ಬಾಂಬ್ ಸ್ಫೋಟಿಸಿದ 10ರ ಬಾಲಕಿ

ಕಾನೋ (ನೈಜೀರಿಯಾ) : ಈಶಾನ್ಯ ನೈಜೀರಿಯಾ ನಗರ ಮೈದುಗುರಿಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ 10 ವರ್ಷದ ಬಾಲಕಿಯೊಬ್ಬಳು ಆತ್ಮಾಹುತಿ ಬಾಂಬ್ ಸಿಡಿಸಿಕೊಂಡಿದ್ದು, ಈ ಭೀಕರ ದುರ್ಘಟನೆಯಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಜನದಟ್ಟಣಿಯ ಪ್ರದೇಶದಲ್ಲಿ ಆಹಾರ ಮಾರಾಟಗಾರನೊಬ್ಬನಿಂದ ನೂಡ್ಲೆಸ್ ಖರೀದಿಗೆಂದು ಆಗಮಿಸಿದ್ದ ಪುಟ್ಟ ಬಾಲಕಿ, ಏಕಾಏಕಿಯಾಗಿ ಸ್ಫೋಟಗೊಂಡಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೈಜೀರಿಯಾದಲ್ಲಿ ಬೋಕೋ ಹರಾಂ ಗುಂಪಿನವರೇ ಆತ್ಮಾಹುತಿ ಬಾಂಬ್ ಸಿಡಿಸಿಕೊಳ್ಳುತ್ತಿದ್ದರೂ, ಬಾಂಬ್ ದಾಳಿ ಬಗ್ಗೆ ಅದು ಹೇಳಿಕೆ ನೀಡಿಲ್ಲ. ಆ ಸಂಘಟನೆಯು ಇಲ್ಲಿ ಬಹುತೇಕ ಮಹಿಳೆಯರು ಮತ್ತು ಯುವತಿಯರನ್ನೇ ಗುರಿಯಾಗಿಸಿಟ್ಟುಕೊಂಡಿದೆ.