ಹೆದ್ದಾರಿ ಮದ್ಯದಂಗಡಿ ನಿಷೇಧ ಸುಪ್ರೀಂ ತೀರ್ಪು ಅಗತ್ಯವಿತ್ತು

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳಿಗೆ ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ  ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಇಂಥದ್ದೊಂದು ಕಠಿಣ ನಿಯಮ ಅಗತ್ಯವಾಗಿ ಬೇಕಿತ್ತು ಹೆದ್ದಾರಿಯಿಂದ ಕನಿಷ್ಠ 500 ಮೀಟರ್ ದೂರ ಕಾಯ್ದುಕೊಳ್ಳಬೇಕು ಮತ್ತು ಬೋರ್ಡ್ ಕೂಡಾ ಹಾಕುವಂತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದು ಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರುವವರು ಈ ಸಂಗತಿಗಳನ್ನು ಚಾಚೂ ತಪ್ಪದೆ ಅನುಸರಿಸಿದರೆ ಮಾತ್ರವೇ ತೀರ್ಪು ಪರಿಣಾಮಕಾರಿಯಾಗಲಿದೆ
ಕೇಂದ್ರ ಹೆದ್ದಾರಿ ಸಚಿವಾಲಯದ ವರದಿ ಪ್ರಕಾರವೇ ಪ್ರತಿನಿತ್ಯ 1374 ಅಪಘಾತ ಸಂಭವಿಸುತ್ತಿದ್ದು 400 ಮಂದಿ ಬಲಿಯಾಗುತ್ತಿದ್ದಾರೆ, ಪರಿಸ್ಥಿತಿ ಹೀಗಿರುವಾಗ ಈ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ್ದು ಸಂಬಂಧಿಸಿದವರ ಕರ್ತವ್ಯ

 

  • ಅನಿಲ್ ಕೋಟ್ಯಾನ್  ಪದವಿನಂಗಡಿ