ಹರಕೆ ಪ್ರಸಂಗದಲ್ಲಿ ಸದ್ಯ ರಾಜಕೀಯ ವಿಡಂಬನೆ ತುರುಕುವುದು ಸರಿಯೇ ?

ಇತ್ತೀಚೆಗೆ ಕೊಣಾಜೆ ಮಾರಿಯಮ್ಮ ಗೋಳಿಯಲ್ಲಿ ಆಯೋಜಿಸಿದ್ದ ಯಕ್ಷಗಾನ ಬಯಲಾಟದಲ್ಲಿ ಕೋಡಂಗಿ ವೇಷಧಾರಿ ತನ್ನನ್ನು ತಾನು ಉಸ್ತುವಾರಿ ಸಚಿವ ಎಂದು ಹೇಳಿಕೊಂಡು ರಾಜನ ಸಿಂಹಾಸನದ ಮೇಲೆ ಕುಳಿತಿರುತ್ತಾನೆ  ರಾಜ ಬಂದು ಸಿಂಹಾಸನ ಮೇಲೆ ಕುಳಿತಿರುವುದಕ್ಕೆ ಆಕ್ಷೇಪಿಸಿ ನೋಡಿಕೊಳ್ಳು ಎಂದರೆ ಸಿಂಹಾಸನ ಮೇಲೆ ಕುಳಿತುಕೊಳ್ಳುವುದಕ್ಕೆ ಅಲ  ಹೊರಗಿನಿಂದ ನೋಡಿಕೊಳ್ಳುವುದು  ಎಂದು ರಾಜ ಹೇಳುತ್ತಾನೆ  ಇದಕ್ಕೆ ಕೋಡಂಗಿ ಪಾತ್ರಧಾರಿ ಉತ್ತರ  ಉಸ್ತುವಾರಿ ಸಚಿವರೆಂದರೆ ನಿದ್ದೆ ಮಾಡುವುದಕ್ಕೆ ಮಾತ್ರವೇ  ಎಂದಾಗಿರುತ್ತದೆ  ಇದಕ್ಕೆ ಪ್ರೇಕ್ಷಕರು ಬಿದ್ದು ಬಿದ್ದು ನಗಾಡುತ್ತಾರೆ.

ಪೌರಾಣಿಕ ಪಾತ್ರವೊಂದರ ಮೂಲಕ ಸದ್ಯದ ರಾಜಕೀಯ ವಿಡಂಬನೆ ಮಾಡಲಾಗುತ್ತಿರುವ ವಿಷಯವೀಗ ಯಕ್ಷಗಾನ ವಲಯದಲ್ಲಿ ಚರ್ಚೆಯಲ್ಲಿದೆ  ಅದೂ ಉಸ್ತುವಾರಿ ಮಂತ್ರಿಯ ಪ್ರಸ್ತಾಪ ನಿದ್ದೆಯೊಂದಿಗೆ ಆಗಿದ್ದು ಚರ್ಚೆಯ ಪ್ರಮುಖ ಅಂಶವಾಗಿದೆ
ವಿಡಂಬನೆ ಇಲ್ಲಿಗೆ ಮುಗಿಯುವುದಿಲ್ಲ. ರಾಜರು ತೆಗೆದುಕೊಳ್ಳುವ ಕಪ್ಪ ಕಾಣಿಕೆಯನ್ನು ಇಂದಿನ ಕಪ್ಪು ಹಣಕ್ಕೆ ಹೋಲಿಸಿ ಮಾತನಾಡುತ್ತಾರೆ. ಅಹಿರಾವಣ ಮಹಿರಾವಣ ಪಾತ್ರಧಾರಿಗಳು  ಓರ್ವ ಪಾತ್ರಧಾರಿ ಐಟಿ ದಾಳಿಯನ್ನು ದರೋಡೆಗೆ ಹೋಲಿಸಿದರೆ  ಕಪ್ಪು ಹಣವನ್ನು ದುಡಿಯದೇ ಬರುವ ಸಂಪತ್ತಿಗೆ ಹೋಲಿಸಿದರೆ ಐಟಿ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾನೆ  ಇನ್ನೋರ್ವ ಪಾತ್ರಧಾರಿ ಸಂಪತ್ತು ಕ್ರೋಢೀಕರಣದ ವಿರುದ್ಧವೂ ಈ ಪಾತ್ರಧಾರಿಗಳು ಮಾತನಾಡುತ್ತಾರೆ. ಹರಕೆ ಪ್ರಸಂಗದಲ್ಲಿ ಇಂತಹ ವಿಡಂಬನೆಗಳು ತುರುಕುವುದು ಸರಿಯೇ  ಸದ್ಯದ ವಿಷಯಗಳನ್ನು ಪೌರಾಣಿಕ ಪಾತ್ರಗಳಿಂದ ವಿಡಂಬನೆಗೊಳಪಡಿಸುವುದೂ ಕೂಡಾ ಚರ್ಚೆಯಲ್ಲಿರುವ ವಿಷಯವಾಗಿದೆ.
ಯಕ್ಷಗಾನದಲ್ಲಿ ಸಾಮಾಜಿಕ ಪ್ರಸಂಗಗಳು ಬೇಡ ಎನ್ನುತ್ತಿರುವ ವಾದಗಳಿರುವಾಗ ಪೌರಾಣಿಕ ಪ್ರಸಂಗಗಳಲ್ಲಿ ಸದ್ಯದ ಸಾಮಾಜಿಕ ವಿಡಂಬನೆ ಅಳವಡಿಸುತ್ತಿರುವ ಪ್ರಕ್ರಿಯೆಗಳು ಮುಂದುವರಿಯುತ್ತಿರುವುದು ಬದಲಾವಣೆ ಅವಶ್ಯಕತೆಯನ್ನು ಎತ್ತಿ ತೋರಿಸುವಂತಿದೆ  ಸಿನಿಮಾಕತೆ ಮತ್ತು ನಾಟಕಗಳ ಕಥೆಗಳನ್ನೇ ಯಕ್ಷಗಾನ ಪ್ರಸಂಗಗಳನ್ನಾಗಿ ಪರಿವರ್ತಿಸಿ ಪ್ರದರ್ಶಿಸುತ್ತಿದ್ದುದನ್ನು ಯಕ್ಷಗಾನ ಪಂಡಿತರು ಆಕ್ಷೇಪಿಸಿದ್ದರು. ಇದು ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಎನ್ನುತ್ತಿದ್ದವರು ಈಗ ನಡೆಯುತ್ತಿರುವ ವಿಡಂಬನೆಗಳಿಗೆ ಯಕ್ಷ ಪಂಡಿತರು ಏನೆನ್ನುತ್ತಾರೆ

 

  • ಮಿಥುನ್, ಕೊಣಾಜೆ