ಹಕ್ಕುಪತ್ರಕ್ಕಾಗಿ ಪರಿಶಿಷ್ಟರ ಸತಾಯಿಸುವಿಕೆ ನಿಲ್ಲಲಿ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೋಳೂರು ಹಿಂದೂ ರುದ್ರಭೂಮಿ ಹತ್ತಿರ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 30 ಕುಟುಂಬ ಕಳೆದ 80 ವರ್ಷದಿಂದ ವಾಸವಾಗಿದ್ದು ಹಕ್ಕು ಪತ್ರಕ್ಕಾಗಿ ಹಲವಾರು ವರ್ಷದಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಪತ್ರ ವ್ಯವಹಾರ ಮಾತ್ರ ನಡೆಸುತ್ತಿದ್ದು ಈ ಬಗ್ಗೆ ಸ್ಪಷ್ಟವಾದ ಕ್ರಮ ಇದುವರೆಗೂ ಕೈಗೊಂಡಿಲ್ಲ
ಸದ್ರಿ ಜಾಗ ಫೋರ್ಟ್ ಲ್ಯಾಂಡ್ ಆಗಿದ್ದು ಹಕ್ಕು ಪತ್ರ ನೀಡಲು ಅವಕಾಶವಿಲ್ಲವೆಂದು ಪತ್ರದಲ್ಲಿ ತಿಳಿಸಿರುತ್ತಾರೆ
ಆದ್ದರಿಂದ ಸರಕಾರದ ಈಗಿನ ಕಾನೂನಿನಂತೆ 94ಸಿಸಿ ಕಾಯಿದೆಯನ್ವಯ ಜಾಗವನ್ನು ಸರ್ವೆ ಮಾಡಿ ವಾಸ್ತವ್ಯವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ವಿನಂತಿ

  • ಸುಧಾಕರ ಬೋಳೂರು
    ಕರ್ನಾಟಕ ದಸಂಸ
    ಮಂಗಳೂರು