ಸ್ಮಶಾನಸದೃಶ ಟಾಗೋರ್ ಪಾರ್ಕ್ ಸೌಂದರ್ಯೀಕರಣ ನಿರರ್ಥಕ

ಠಾಗೋರ್ ಪಾರ್ಕ್ ಪುನಶ್ವೇತನಕ್ಕೆ ರೂಪಾಯಿ 15 ಲಕ್ಷ ಮಂಜೂರು ಮಾಡಲಾಗಿ ಪಾರ್ಕ್ ಅಭಿವೃದ್ಧಿಗೆ ಹಾಗೂ ವಿದ್ಯುದ್ದೀಕರಣಕ್ಕೆ ಈ ಹಣವನ್ನು ಬಳಸಲಾಗುವ ಬಗ್ಗೆ ವರದಿ ಪ್ರಕಟವಾಗಿದೆ  ನಾವು ಸಣ್ಣದಿರುವಾಗ ಈ ಟಾಗೋರ್ ಪಾರ್ಕ್ ವೈಭವವೇನು  ಆಗಿನ ದಿನಗಳಲ್ಲಿ ಠಾಗೋರ್ ಪಾರ್ಕಿನಲ್ಲಿ ವಿವಿಧ ಜಾತಿಯ ಗಿಡ ಸಸಿಗಳಿದ್ದು ಶೋಭಾಯಮಾನವಾಗಿತ್ತು  ಅದಲ್ಲದೆ ಮಕ್ಕಳಿಗೆ ಆಟ ಆಡುವ ಸೌಲಭ್ಯಗಳಿದ್ದು  ಜಾರು ಬಂಡಿ ಸಹ ಇತ್ತು. ಸಂತ ಆಲೋಶಿಯಸ್ ಕಾಲೇಜ್ ಹಾಗೂ ಠಾಗೋರ್ ಪಾರ್ಕ್ ಎತ್ತರದ ಪ್ರದೇಶದಲ್ಲಿದ್ದು  ಸಾಯಂಕಾಲ ಹೊತ್ತು ಸಮುದ್ರದಲ್ಲಿ ಸೂರ್ಯ ಮುಳುಗುವ ದೃಶ್ಯ ತುಂಬಾ ರಮಣೀಯವಾಗಿದ್ದು ಅದನ್ನು ನೋಡಿ ಎಷ್ಟೋ ಪ್ರವಾಸಿಗರು ಖುಷಿಪಡುತ್ತಿದ್ದರು  ಜನರು ತುಂಬಾ ಸಂಖ್ಯೆಯಲ್ಲಿ ಬಂದು ಆ ಕಡಲತೀರದ ದೃಶ್ಯದ ಸವಿಯನ್ನುಂಡು ಸಂತೋಷದ ಸಾಗರದಲ್ಲಿ ಮುಳುಗಿ ಹೋಗುತ್ತಿದ್ದರು  ಆ ದೃಶ್ಯ ಮಾತ್ರ ಈಗ ಕಾಣದಾಗಿದೆ  ಪಾರ್ಕಿನ ಮುಂಭಾಗ  ಪೂರ್ತಿಯಾಗಿ ಕಟ್ಟಡಗಳಿಂದ ಆವೃತ್ತವಾಗಿದೆ  ಪಾರ್ಕಿಗೆ ಹೋದವರಿಗೆ  ಪಾರ್ಕಿನಲ್ಲಿ ಕುತ್ಕೊಂಡವರಿಗೆ ಸುತ್ತಮುತ್ತಲೂ ಕಾಣುವುದು ವಸತಿ ಸಂಕೀರ್ಣಗಳೇ  ಆಗಿನ ಅಂದ ಚೆಂದ ಎಲ್ಲ ಮಾಸಿ ಹೋಗಿ ಈಗ ಬರೀ ಪಾರ್ಕ್ ಮಾತ್ರ ಕಾಣಬಹುದಾಗಿದೆ
ನಿಜಕ್ಕೂ ಠಾಗೋರ್ ಪಾರ್ಕ್ ಈಗ ಸ್ಮಶಾನದಂತಿದೆ. ಹಾಗಾಗಿ ಎಲ್ಲರೂ ಕದ್ರಿ ಪಾರ್ಕಿನತ್ತ ವಾಲಿ ತದನಂತರ ಅವರ ಆಸಕ್ತಿ ಪಿಲಿಕುಳ ನಿಸರ್ಗಧಾಮದತ್ತ ಹೋಗಿ ಠಾಗೋರ್ ಪಾರ್ಕಿಗೆ ಬರುವವರ ಸಂಖ್ಯೆ ಕ್ಷೀಣವಾಗಿತೊಡಗಿ ಮನಪಾದವರು ಠಾಗೋರ್ ಪಾರ್ಕನ್ನು ಅಭಿವೃದ್ಧಿ ಮಾಡಲು ಕ್ರಮ ಜರುಗಿಸುವುದೇ ನಿರರ್ಥಕ
ಮನಪಾ ನಿದ್ದೆಯಿಂದ ಎಚ್ಚರವಾದಂತೆ ಠಾಗೋರ್ ಪಾರ್ಕನ್ನು ಸುಂದರೀಕರಣಗೊಳಿಸಲು ಹೊರಟಿರುವುದು ತೀರಾ ವಿಪರ್ಯಾಸವೆನ್ನಬಹುದು. ನಮ್ಮ ನಗರದೊಳಗಿನ ಹಲವು ಪಾರ್ಕುಗಳನ್ನು ಅಭಿವೃದ್ಧಿಗೊಳಿಸಲು ಮನಪಾ ಖಂಡಿತಕ್ಕೂ ವಿಫಲವಾಗಿದೆ ಎನ್ನಬಹುದು

  • ಜೆ ಎಫ್ ಡಿ ಸೋಜ ಅತ್ತಾವರ