ಸುರತ್ಕಲ್ ಬಸ್ ನಿಲ್ದಾಣವನ್ನು ಯಾರೂ ಕೇಳುವವರಿಲ್ಲವೇ

ಸುರತ್ಕಲ್ ಸರ್ವೀಸ್ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿರುವುದರಿಂದ ಬಸ್ ಕಾಯುವ ಪ್ರಯಾಣಿಕರಿಗೆ ಮತ್ತು ನಿಲ್ದಾಣ ಪ್ರವೇಶಿಸುವ ವೇಗದೂತ ಹಾಗೂ ಸರ್ವಿಸ್ ಬಸ್‍ಗಳಿಗೆ ಬಹಳ ತೊಂದರೆಯಾಗಿದೆ
ಖಾಸಗಿ ವಾಹನದವರು ಇಷ್ಟ ಪ್ರಕಾರ ವಾಹನಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋಗುತ್ತಿರುತ್ತಾರೆ  ಇಲ್ಲಿ ಪ್ರಯಾಣಿಕರು ಉರಿಬಿಸಿಲಲ್ಲಿ ವಾಹನಗಳ ಸಂದು ಗೊಂದಿನಲ್ಲಿ ನಿಂತುಕೊಂಡು ಬಸ್ ಬರುತ್ತಿದ್ದಂತೆ ನುಸುಳಿಕೊಂಡು ಬರಬೇಕಾಗುತ್ತದೆ
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊದಲೆಲ್ಲ ಪಿಸಿಗಳ ಕೊರತೆ ಇತ್ತು  ಇದೀಗ ಠಾಣೆಯಲ್ಲಿ ಪೇದೆ  ಸೇರಿದಂತೆ ಹೋರ್ಮ್‍ಗಾರ್ಡ್ ಸಿಬ್ಬಂದಿಗಳು ಅಗತ್ಯ ಇಲ್ಲದೆ ಕಡೆ ನಿಂತು ಟ್ರಾಫಿಕ್ ನಿಯಂತ್ರಣ ಮಾಡುವುದಕ್ಕಿಂತ ಒಬ್ಬರನ್ನು ಖಾಯಂ ಆಗಿ ಸುರತ್ಕಲ್ ಸರ್ವೀಸ್ ವೇಗದೂತ ಬಸ್ಸುಗಳು ಬಂದು ನಿಲ್ಲುವ ನಿಲ್ದಾಣದೊಳಗೆ ವಾಹನಗಳನ್ನು  ಪ್ರಯಾಣಿಕರನ್ನು ನಿಯಂತ್ರಿಸಿದರೆ ಎಷ್ಟೊಂದು ಜನರಿಗೆ ಅನುಕೂಲವಾಗಬಹುದು ಅದೇ ರೀತಿ ನಿಲ್ದಾಣದೊಳಗೆ ವಾಹನ ನಿಲ್ಲಿಸುವವರಿಗೂ ಕಡಿವಾಣ ಹಾಕಿ ಕೇವಲ ಸರ್ವೀಸ್  ವೇಗದೂತ ಬಸ್ಸುಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಬೇಕಾಗಿದೆ

  • ಕೆ ಸುಜೀತ್ ಸುವರ್ಣ 
    ಇಡ್ಯಾ-ಸುರತ್ಕಲ್