ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರಕ್ಕೆ ಕಾಲ ಪಕ್ವವಾಗಿಲ್ಲ

ನೋಟು ಅಮಾನ್ಯೀಕರಣದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಇನ್ನೂ ಕೆಲವು ಕಾಲ ಇದೇ ರೀತಿ ಮುಂದುವರಿದರೆ ಮೋದಿಯವರ ಒಳ್ಳೆಯ ಕಾರ್ಯಗಳಿಗೆಲ್ಲ ಇದೊಂದು ಪ್ರಕರಣದಿಂದ ಹಿನ್ನೆಡೆ ಉಂಟಾಗಬಹುದೆಂಬ ಆತಂಕ ಮೂಡಿದೆ  ಸಾಮಾನ್ಯ ಜನರು ನೋಟು ಅಮಾನ್ಯೀಕರಣವನ್ನು ಸ್ವಾಗತಿಸಿ ತಮಗೆ ಒದಗಿರುವ ಕಷ್ಟವನ್ನು ಸಂಭಾಳಿಸುತ್ತಿದ್ದರಾದರೂ ಇದು ಇದೇ ರೀತಿ ಮುಂದುವರಿದರೆ ಜನರ ತಾಳ್ಮೆಯೂ ತಪ್ಪಬಹುದೇನೋ  ಹಾಗಾಗಿ ಬೇಗನೆ ಬ್ಯಾಂಕುಗಳಲ್ಲಿ, ಎಟಿಎಂಗಳಲ್ಲಿ ಸಾಕಷ್ಟು ಹಣ ಸಿಗುವಂತೆ ವ್ಯವಸ್ಥೆ ಮಾಡಬೇಕಾಗಿದೆ ಅದರಂತೆ ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರಕ್ಕೆ ಕಾಲ ಪಕ್ವವಾಗಿಲ್ಲ

  • ಸುದರ್ಶನ್ ರೈ ಉಡುಪಿ