ಸಂಗಬೆಟ್ಟುವಿನಲ್ಲಿ ನೆಟ್ವರ್ಕ್ ಸಮಸ್ಯೆ

ಪ್ರಧಾನಿ ಮೋದಿ ಇಡೀ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಲು ಹೊರಟಿದ್ದರೂ ಸಂಗಬೆಟ್ಟುವಿನ ಜನರಿಗೆ ಕನಿಷ್ಠ ಮೊಬೈಲ್ ಸಂಪರ್ಕ ಕೂಡಾ ಸರಿಯಾಗಿ ಸಿಗದೆ ಪರದಾಡುವ ಪರಿಸ್ಥಿತಿ  ಇಲ್ಲಿ ಮೊಬೈಲ್ ಟವರ್ ಇಲ್ಲ ಅಂತ ಅಲ್ಲ  ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಟವರ್ ಸಂಗಬೆಟ್ಟು ದೇವಸ್ಥಾನದ ಹತ್ತಿರದಲ್ಲೇ ಇದೆ  ಆದರೆ ಇರುವ ಮೊಬೈಲ್ ಟವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ
ಕರೆಂಟ್ ಹೋದ ವೇಳೆ ಸುಮಾರು ಹತ್ತು ನಿಮಿಷಗಳ ಒಳಗೆ ಜನರೇಟರ್ ಹಾಕದ್ದಿದ್ದರೆ ತಂತಾನೇ ನೆಟ್‍ವರ್ಕ್ ಮಾಯವಾಗುತ್ತದೆ  ಹಗಲು ಹೊತ್ತಿನಲ್ಲಾದರೆ ದೇವಳದ ಸಿಬ್ಬಂದಿಯೊಬ್ಬರು ಜನರೇಟರ್ ಹಾಕುತ್ತಾರೆ  ಆದರೆ ರಾತ್ರಿ ವೇಳೆ ಜನರೇಟರ್ ಹಾಕಲು ವ್ಯವಸ್ಥೆ ಇಲ್ಲದೆ ಕರಂಟ್ ಹೋದರೆ ಮೊಬೈಲ್ ಸಿಗ್ನಲ್ ಸಿಗದಂತಾಗುತ್ತಿದೆ
ಹೇಳಿಕೇಳಿ ಸಂಗಬೆಟ್ಟುವಿನಲ್ಲಿ ಸ್ವಲ್ಪ ಮೊಬೈಲ್ ಸಿಗ್ನಲ್ ಇರುವುದು ಎಂದರೆ ಬಿ ಎಸ್ ಎನ್ ಎಲ್ ಮಾತ್ರ. ಆದ್ದರಿಂದ ಸ್ಥಳೀಯರು ಹೆಚ್ಚಾಗಿ ಈ ಮೊಬೈಲ್ ಸಂಪರ್ಕವನ್ನೇ ಬಳಸುತ್ತಾರೆ  ಆದರೆ ರಾತ್ರಿ ವೇಳೆ ಕರೆಂಟ್ ಹೋದ ಸಂದರ್ಭ ಏನಾದರೂ ಅವಘಡ ಸಂಭವಿಸಿದಾಗ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದಂತಾಗಿದೆ  ತುಂಬು ಗರ್ಭಿಣಿಯರು  ವಯೋ ವೃದ್ಧರು ಮನೆಯಲ್ಲಿದ್ದರೆ ಯಾವಾಗಲೂ ಆತಂಕ ಇದ್ದೇ ಇರುತ್ತದೆ ಹಾಗಾಗಿ ಕೂಡಲೇ ಸಂಗಬೆಟ್ಟುವಿನಲ್ಲಿ ಬಿ ಎಸ್ ಎನ್ ಎಲ್ ಟವರ್ ಅವ್ಯವಸ್ಥೆ ಕೂಡಲೇ ಸರಿಪಡಿಸುವತ್ತ ಅಧಿಕಾರಿಗಳು ಮನಸ್ಸು ಮಾಡಬೇಕಿದೆ

  • ಕೆ ಸುಧಾಕರ  ಸಂಗಬೆಟ್ಟು