ವೃದ್ಧೆಯ ಕೈಕಾಲು ಕಟ್ಟಿ ಕೊಲೆ

ಕೊಠಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆ ಶವ

ಕಾರಣ ನಿಗೂಢ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ·ವೃದ್ಧೆಯೊಬ್ಬರÀನ್ನು ಮನೆಯೊಳಗಡೆ ಕೊಲೆ ಮಾಡಲಾಗಿದ್ದು, ಕೈಕಾಲು ಕಟ್ಟಿ ಹಾಕಲಾಗಿದ್ದ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾರಾಡಿ ಕಾರಡ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನಿನ್ನೆ ಶವ ಪತ್ತೆಯಾಗಿದೆ.

ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು
ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು

ಕಾರಡ್ಕದ ಬಾಡಿಗೆ ಮನೆಯಲ್ಲಿರುವ ದಿ ಕೃಷ್ಣ ಮೂರ್ತಿಯವರ ಪತ್ನಿ ವಿನೋದಿನಿ (77) ಕೊಲೆಯಾದವರು. ಈಕೆ ಗೋಪಿನಾಥ್ ಮಾಲಕತ್ವದ ಬಾಡಿಗೆ ಮನೆಯಲ್ಲಿ ಮಗಳ ಮದುವೆ ಬಳಿಕ ಒಬ್ಬಂಟಿಯಾಗಿಯೇ ತನ್ನ ಪಾಡಿಗೆ ತಾವಿದ್ದರು. ಬಾಡಿಗೆ ಮನೆಯ ಇನ್ನೊಂದು ಪಾಶ್ರ್ವದಲ್ಲಿದ್ದ ರಾಮಯ್ಯ ಬಲ್ಲಾರ್ ಎಂಬವರು ಮನೆಯವರೊಂದಿಗೆ ಹೊರ ಹೋದವರು ಡಿಸೆಂಬರ್ 22ರಿಂದು ಮನೆಗೆ ಮರಳಿದ್ದರು. ಈ ವೇಳೆ ವೃದ್ಧೆ ಮನೆ ಕೊಠಡಿ ಬೀಗ ಹಾಕಿದ ಸ್ಥಿತಿಯಲ್ಲೇ ಇದ್ದು, ಅವರು ಸಂಬಂಧಿಕರ ಮನೆಗೆ ತೆರಳಿರಬೇಕೆಂದು ರಾಮಯ್ಯ ಗ್ರಹಿಸಿದ್ದರು.

ನಂತರ ವೃದ್ಧೆ ಮನೆಯಿಂದ ದುರ್ವಾಸನೆ ಬರುತ್ತಿರುವುದಾಗಿ ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ನೋಡಿದಾಗ ವಿನೋದಿನಿ ಶವ ಕೈಕಾಲು ಕಟ್ಟಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಮನೆ ಮಾಲಿಕ ಗೋಪಿನಾಥ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಎಸ್ಪಿ ರಿಷ್ಯಂತ್, ಪುತ್ತೂರು ನಗರ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಅಪರಾಧ ಪತ್ತೆ ವಿಭಾಗದ ಎಸೈ ವೆಂಕಟೇಶ್ ಭಟ್, ಎಎಸೈ ಐ ದುಗ್ಗಪ್ಪ, ಪ್ರೊಬೆಷನರಿ ಎಸೈ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.