ವಿದ್ಯಾನಗರದಲ್ಲೂ ಮರಳು ನಕಲಿ ಪಾಸ್ ತಯಾರಿ ಅಡ್ಡೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ನಗರದ ಪೆÇಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ನಕಲಿ ಮರಳು ಪಾಸ್ ತಯಾರಿ ಅಡ್ಡೆ ಮತ್ತು ಮರಳು ಸಾಗಾಟ ತಂಡಗಳ ವಿರುದ್ಧ ಪೆÇಲೀಸರು ಕಾರ್ಯಾಚರಣೆ ಆರಂಭಿಸಿರುವ ಮಧ್ಯೆ ಅಂತಹ ಕೇಂದ್ರವೊಂದನ್ನು ವಿದ್ಯಾನಗರ ಪರಿಸರದಲ್ಲಿ ಪೆÇಲೀಸರು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಚೆಂಗಳ ಚೇರೂರು ನಿವಾಸಿ ಅಬ್ದುಲ್ ಸಲೀತ್ (24) ಎಂಬಾತನ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಈತ ತನ್ನ ಮನೆಯಲ್ಲೇ ನಕಲಿ ಪಾಸ್ ತಯಾರಿಸುತ್ತಿದ್ದನೆಂದು ಪೆÇಲೀಸರು ತಿಳಿಸಿದ್ದಾರೆ.