ವಂಚನೆ ಆರೋಪಿಗಳಿಗೆ ಜಾಮೀನು

ಸಾಂದರ್ಭಿಕ ಚಿತ್ರ

ಪುತ್ತೂರು :  ಅಮೇಝಾನ್ ಪಾರ್ಸೆಲ್ ಸರ್ವಿಸ್‍ನಲ್ಲಿ ಉದ್ಯೋಗದಲ್ಲಿದ್ದು ಕಚೇರಿಗೆ ಬಂದ ಪಾರ್ಸೆಲನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ವಿಕ್ರಂ ಮತ್ತು ಪ್ರೀತಂ ಎಂಬ ಇಬ್ಬರು ಆರೋಪಿಗಳನ್ನು ವಂಚನೆ ಪ್ರಕರಣ ದಾಖಲಿಸಿದ ನಗರ ಪೊಲೀಸರು ಬಂಧಿಸಿದ್ದರು. ಪಾರ್ಸೆಲ್ ಕೇಂದ್ರಕ್ಕೆ ಬಂದಿರುವ ಸಾವಿರಾರು ರೂ ಮೌಲ್ಯದ ಸೊತ್ತುಗಳನ್ನು ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ಕು ಮಂದಿ ಸಿಬಂದಿಗಳು ಕಂಪೆನಿಗೆ ವಂಚನೆ ಮಾಡಿ ಮಾರಾಟ ಮಾಡಿದ್ದು ಘಟನೆಯ ಕುರಿತು ಅಮೇಝಾನ್ ಕಂಪೆನಿ ಮಾಲಕ ನಗರ ಪೊಲೀಸರಿಗೆ ದೂರು ನೀಡಿದ್ದರು.