ಲೈಂಗಿಕ ಕ್ರಿಯೆ ವಿಡಿಯೋ ಮಾಡುವ ಅಧಿಕಾರವಿದೆಯೇ

ಅಬಕಾರಿ ಸಚಿವ ಮೇಟಿಯವರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವುದು ಬಹುತೇಕ ಖಚಿತ  ಆದುದರಿಂದ ಈ ಪ್ರಕರಣ ಅವರ ರಾಜೀನಾಮೆಯಲ್ಲಿ ಅಂತ್ಯವಾಗಬಾರದು  ಮೇಟಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರಕಾರದ ಹಾಗೂ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ  ಆದರೆ ನಾವು ಇಲ್ಲಿ ಆಲೋಚಿಸಬೇಕಾದ ಇನ್ನೊಂದು ವಿಷಯವೇನೆಂದರೆ ನಮಗೆ ಯಾರದ್ದಾದರೂ ಲೈಂಗಿಕ ಕ್ರಿಯೆಗಳನ್ನು ವಿಡಿಯೋಗ್ರಾಫ್ ಮಾಡುವ ಅಧಿಕಾರವಿದೆಯೇ ಎಂಬುದು  ಅದು ಅನೈತಿಕ ಆಗಿರಬಹುದು. ಅದು ಮುಖ್ಯವಲ್ಲ  ನಮಗೆ ಇಲ್ಲಿ ಬ್ಲೂ ಫಿಲ್ಮ್ ಮಾಡುವುದು ಬಿಡಿ  ಬ್ಲೂಫಿಲ್ಮ್ ವೀಕ್ಷಿಸುವುದಕ್ಕೇನೇ ಅವಕಾಶ ಇಲ್ಲ  ಇದು ಅಪರಾಧವಾಗುತ್ತದೆ  ಹೀಗಿರುವಾಗ ಯಾರೋ ಅನೈತಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ವೀಡಿಯೋಗ್ರಾಫ್ ಮಾಡಿ ಪ್ರದರ್ಶಿಸುವುದು ತಪ್ಪಲ್ಲವೇ
ಮೇಟಿಯವರ ಪ್ರಕರಣದಲ್ಲಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿರುತ್ತಾರೆ ಎಂಬುದು ಸರಿ  ಆದರೆ ಅವರ ಜೊತೆಗಿದ್ದ ಮಹಿಳೆಯರ ಮಾನ ಹರಾಜು ಮಾಡುವುದು ಎಷ್ಟು ಸರಿ   ಇದು ಖಂಡಿತಾ ತಪ್ಪು  ಆದುದರಿಂದ ಈ ಪ್ರಕರಣದಲ್ಲಿ ಮೇಟಿಯವರಿಗೆ ಮತ್ತು ಈ ಪ್ರಕರಣವನ್ನು ವೀಡಿಯೋಗ್ರಾಫ್ ಮಾಡಿದವರಿಗೆ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ನಾಳೆ ನೂರಾರು ಜನ ಈ ಕೆಲಸಕ್ಕೆ ಕೈ ಹಾಕಬಹುದು ಹೀಗಾಗಬಾರದು  ಆದುದರಿಂದ ಈ ನಿಟ್ಟಿನಲ್ಲಿ ಜನರು ಮತ್ತು ಸರಕಾರ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ

  • ತುಕರಾಮ ಕೊಂಚಾಡಿ
    ಪೆರ್ಲಗುರಿ-ಮಂಗಳೂರು