ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಮೊರೆ ಹೋದ ಚುನಾವಣಾ ಆಯೋಗ

 ಬೆಂಗಳೂರು :  ನಗರಾಡಳಿತ ಸಂಸ್ಥೆಗಳ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಮೀಸಲಾತಿ ಹಾಗೂ ವಾರ್ಡುಗಳ ವಿಂಗಡಣೆ ಪಟ್ಟಿಯನ್ನು ತನಗೆ ನೀಡಲು ವಿಳಂಬಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟಿನ ಮೊರೆ ಹೋಗಿದೆ.

ರಾಜ್ಯದ 18 ನಗರಾಡಳಿತ ಸಂಸ್ಥೆಗಳ ವಾರ್ಡುಗಳ  ವಿಂಗಡಣೆಗೆ ಸಂಬಂಧಿಸಿದ ಅಂತಿಮ  ಅಧಿಸೂಚನೆ ಹಾಗೂ  125 ನಗರಾಡಳಿತ ಸಂಸ್ಥೆಗಳ ಎಲ್ಲಾ ವಾರ್ಡುಗಳ ಮೀಸಲಾತಿ ಪಟ್ಟಿಯನ್ನು ತನಗೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕೆಂದು ಆಯೋಗ  ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ನಿಟ್ಟಿನಲ್ಲಿ ತಾನು ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ  ಹಲವಾರು ಬಾರಿ ಮನವಿ ಮಾಡಿದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಯೋಗ ದೂರಿದೆ. ಈ ಪಟ್ಟಿಯನ್ನು  ಆಯೋಗಕ್ಕೆ ನೀಡಿ ಚುನಾವಣೆಯನ್ನು ಸುಗಮವಾಗಿ ನಡೆಸಲು ಸಹಕಾರ ನೀಡುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಆಯೋಗ ಹೇಳಿದೆ.

 

LEAVE A REPLY