ರಸ್ತೆ ದಾಟಲು ವಿಭಜಕ ಬೇಕು

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ವೆಲೆನ್ಸಿಯಾವರೆಗೆ ವಾಹನಗಳ ನಿಬಿಡತೆಯಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾಗಿದೆ  ಈ ರಸ್ತೆ ಇದುವರೆಗೆ ವಿಭಾಜಕ ಅಳವಡಿಸದೆ ಇರುವುದರಿಂದ ಮೈಲುದ್ಧ ಸಾಲು ಸಾಲು ವಾಹನಗಳು ಸಂಚರಿಸುವ ಈ ರಸ್ತೆಯ ಒಂದು ಬದಿಯಲ್ಲಿರುವ ಪಾದಚಾರಿಗಳು ಇನ್ನೊಂದು ಬದಿ ದಾಟಲು ಗಂಟೆಗಟ್ಟಲೆ ಕಾದು ನಿಲ್ಲಬೇಕಾಗಿದೆ
ಈ ಸಮಸ್ಯೆಗೆ ಕೂಡಲೇ ಮುಕ್ತಿ ಸಿಗದಿದ್ದಲ್ಲಿ ಮುಂದೆ ಅವಘಡಗಳು ಸಂಭವಿಸುವುದನ್ನು ತಪ್ಪಿಸಲಾಗದು

  • ಪ್ರಭಾಕರ ಶೆಟ್ಟಿ  ಮಂಗಳೂರು