ಮೋದಿ ಫಕೀರರೇ ?

ತನ್ನನ್ನು  `ಫಕೀರ’ ಎಂದು ಕರೆದುಕೊಳ್ಳುವ ವ್ಯಕ್ತಿ ದಿನಕ್ಕೊಂದು ದುಬಾರಿ ಸೂಟ್ ತೊಡಲು ಸಾಧ್ಯವೇ ? ಮೋದಿಯ ಒಂದೊಂದು ಸೂಟ್ ಕಡೇ ಪಕ್ಷ ಹತ್ತು ಸಾವಿರ ಬೆಲೆಯದ್ದು ಹಾಗೂ ಅವರು ಒಮ್ಮೆ ತೊಟ್ಟ ಸೂಟ್ ಇನ್ನೊಮ್ಮೆ ತೊಡುವುದಿಲ್ಲ. ಅವರು ತಮ್ಮ ಬಟ್ಟೆಯ ಮೇಲೆಯೇ ತಿಂಗಳಿಗೆ ಕನಿಷ್ಠ ಒಂದು ಲಕ್ಷ ಖರ್ಚು ಮಾಡುತ್ತಾರೆ ಎನ್ನಲಾಗುತ್ತದೆ. ಯಾವುದೇ ನಿಜ ಫಕೀರ ತಿಂಗಳಿಗೊಮ್ಮೆ ಖಾಸಗಿ ವಿಮಾನದಲ್ಲಿ ವಿದೇಶಕ್ಕೆ ಭೇಟಿ ಕೊಡುತ್ತಾರೆಯೇ ? ಹಾಗಿರುವಾಗ ಅವರು ತಮ್ಮನ್ನು ತಾವು ಫಕೀರ ಎಂದು ಕರೆದುಕೊಂಡು ನಿಜವಾದ ಫಕೀರರಿಗೆ ಅವಮಾನ ಮಾಡುವುದು ಸರಿಯೇ ?

  • ಎಮ್ ಪ್ರಶಾಂತ್ ಮುಂಡಾಲ, ಬಜಪೆ-ಮಂಗಳೂರು