ಮುಲ್ಕಿ ರಿಕ್ಷಾ ನಿಲ್ದಾಣದಲ್ಲಿ ಕೃತಕ ನೆರೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಹೋಬಳಿಯಲ್ಲಿ ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದ ಅಲ್ಲಲ್ಲಿ ಕೃತಕ ನೆರೆ ಸೃಷ್ಠಿಯಾಗಿ ವಾಹನ ಚಾಲಕರು ಸಹಿತ ಪ್ರಯಾಣಿಕರು ಪರದಾಡಬೇಕಾಯಿತು. ಮುಲ್ಕಿ ಬಸ್ ನಿಲ್ದಾಣದ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಕೃತಕ ನೆರೆಯಿಂದ ರಿಕ್ಷಾ ಚಾಲಕರ ಪರಿಸ್ಥಿತಿ ಅಯೋಮಯವಾಯಿತು.

ಬಸ್ ನಿಲ್ದಾಣ ಬಳಿಯ ಕೆಸರು ನೀರು ತಗ್ಗು ಪ್ರದೇಶವಾದ ರಿಕ್ಷಾ ನಿಲ್ದಾಣದ ಬಳಿ ತುಂಬಿಕೊಂಡು ನಡೆದಾಡಲು ತ್ರಾಸದಾಯಕವಾಗಿ ಪರಿಣಮಿಸಿದೆ ಎಂದು ರಿಕ್ಷಾ ಚಾಲಕ ವಿಲ್ಫಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಮುಲ್ಕಿ ನಿಲ್ದಾಣದ ಬಳಿ ಒಳಚರಂಡಿ ಅವ್ಯವಸ್ಥೆಯ ಆಗರವಾಗಿದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.