ಮಟ್ಕಾ : ಮೂವರು ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಓಮ್ನಿಯಲ್ಲಿ ಮಟ್ಕಾಂ ದಂಧೆ ನಡೆಸುತ್ತಿದ್ದ ಮೂವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಹೆಜಮಾಡಿಯ ಪಾಂಡುರಂಗ ಕರ್ಕೇರ, ಅರುಣ್ ಹಾಗೂ ಪರ್ವೇಜ್ ಮುಸ್ತಫ್ ಎಂಬುದಾಗಿ ಗುರುತಿಸಲಾಗಿದೆ.

ಪಡುಬಿದ್ರಿಯ ಮಹಾದೇವಿ ಹೋಟೆಲ್ ಮುಂಭಾಗ ಸಾರ್ವಜನಿಕವಾಗಿ ಜೂಜಾಟದಲ್ಲಿ ತೊಡಗಿದ ಸಂದರ್ಭ ಖಚಿತ ಮಾಹಿತಿ ಪಡೆದ ಪೊಲೀಸರು ಸುತ್ತುವರಿದು ಆರೋಪಿಗಳನ್ನು ವಶಕ್ಕೆ ಪಡೆದರು. ಬಂಧಿತರಿಂದ 7150 ರೂ ನಗದು ಓಮ್ನಿ ಮತ್ತು ಮಟ್ಕಾ ಬರೆಯಲು ಉಪಯೋಗಿಸುತ್ತಿದ್ದ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.