ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ ಜೋಕೆ

ಈಗಿನ ಮಕ್ಕಳಿಗೆ ಮನೆಯಲ್ಲಿ ಮಾಡುವ ಅಕ್ಕಿ ತಿಂಡಿಗಳಾದ ದೋಸೆ  ಪುಂಡಿ  ಇಡ್ಲಿ  ಗಟ್ಟಿ ಮುಂತಾದ ತಿಂಡಿಗಳೆಂದರೆ ಯಾಕೋ ಅಲರ್ಜಿ  ಇದು ಯಾಕೆ ಹೇಳುತ್ತೇನೆಂದರೆ  ಮೊನ್ನೆ ನಾನು ನನ್ನ ಹತ್ತಿರದ ಸಂಬಂಧಿಗಳ ಮನೆಯಲ್ಲಿ ಒಂದು ದಿನ ತಂಗಿದ್ದೆನು  ಮಾರನೇ ದಿನ ಬೆಳಿಗ್ಗೆ ಕಾಫಿ ತಿಂಡಿಗಾಗಿ ಕಾಯುತ್ತಾ ಇರುವಾಗ ಅಲ್ಲಿ ಮೇಜಿನ ಮೇಲೆ  ಸಮೋಸಾ ಮ್ಯಾಗಿ ಫಿಜಾ ಬ್ರೆಡ್ ಹಾಗೂ ಇನ್ನಿತರ ಮೈದಾ ತಿಂಡಿಗಳನ್ನು ಕಂಡು ಹೌಹಾರಿದೆ  ಇದೇನಿದು ಎಂದು ಕೇಳುವ ಮೊದಲೇ ಅವರೆಂದರು  ನಮ್ಮ ಮಕ್ಕಳಿಗೆ ಇದೇ ಬೆಳಗಿನ ತಿಂಡಿಗಳು  ಇದು ಎಂದರೆ ಅವರಿಗೆ ಪಂಚ ಪ್ರಾಣ ವೆಂದರು

  • ಮುರಾರಿ ಪುತ್ತೂರು