ಮಂಗಳೂರು ಕಟೀಲು ಕಿನ್ನಿಗೋಳಿ ಬಸ್ಸಿನಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ಸುಲಿಗೆ

ಸಾಂದರ್ಭಿಕ ಚಿತ್ರ

ಮಂಗಳೂರಿನಿಂದ ಹೊರಡುವ ಪಕ್ಷಿಕೆರೆ  ಕಿನ್ನಿಗೋಳಿ  ಕಟೀಲು ಕಡೆ ಹೋಗುವ ಸರ್ವೀಸ್ ಬಸ್ಸಿನವರು ಮನಸ್ವೀ ಪ್ರಯಾಣಿಕರಿಂದ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರತೊಡಗಿದೆ
ಜನಸಾಮಾನ್ಯರು ನೋಟು ನಿಷೇಧದಿಂದ ಹಣಕ್ಕೆ ಪರದಾಟ ಪಡುತ್ತಿರುವ ಸಂದರ್ಭದಲ್ಲಿ ಈ ರೀತಿ ಏಕಾಏಕಿ ಬಸ್ ದರ ಹೆಚ್ಚಿಸಿರುವುದು ಖಂಡನೀಯ
ನಿರ್ದಿಷ್ಟ ಕಡೆಗಳಿಗೆ ಹೋಗಲು ಮೊದಲಿದ್ದ ದರವೇ ಹೆಚ್ಚು  ಈ ಬಾರಿ ದರ ಏರಿಸಬೇಕೆಂತಲೇ ಇರಲಿಲ್ಲ  ಯಾಕೆಂದರೆ ಪೆಟ್ರೋಲ್ ಡೀಸೆಲ್ ದರಗಳು ಕೆಲವೊಮ್ಮೆ ಮೂರ್ನಾಲ್ಕು ಬಾರಿ ದರಗಳು ಇಳಿದಿವೆ  ಆಗ ಬಸ್ಸಿನವರು ಡೀಸೆಲ್ ದರ ಇಳಿದಿದೆ ಎಂದು ಹಣ ಕಡಿಮೆ ತೆಗೆಯುತ್ತಾರೋ  ಅಷ್ಟೇ ಹಣವನ್ನು ವಸೂಲಿ ಮಾಡಿ ಪ್ರಯಾಣಿಕರನ್ನು ಬೋಳಿಸುತ್ತಿದ್ದಾರೆ  ಅಪರೂಪಕ್ಕೊಮ್ಮೆ ಡೀಸಿಲ್ ದರ ಏರಿಕೆಯಾದ ಕೂಡಲೇ ಸದ್ದಿಲ್ಲದೇ ಟಿಕೆಟ್ ದರ ಏರಿಸಿರುವುದು ಖಂಡಿತಾ ಸರಿಯಲ್ಲ  ಈ ಬಗ್ಗೆ ಪ್ರಶ್ನಿಸಿದರೆ  ನಮಗೇನೂ ಗೊತ್ತಿಲ್ಲ  ಕಂಪ್ಯೂಟರ್ ಮಾಡುವುದು  ಎಂದು ಸಬೂಬು ಕೊಡುತ್ತಾರೆ  ಕಂಪ್ಯೂಟರಲ್ಲಿ ಇಂತಿಂಥ ಸ್ಥಳಗಳಿಗೇ ನಾವೇ ದರ ಪಟ್ಟಿಯನ್ನು ಸೆಟ್ ಮಾಡುವುದಲ್ಲವೇ  ಕಂಪ್ಯೂಟರ್ ಏನೇ ದರ ಪಟ್ಟಿ ಮಾಡುತ್ತದೆಯೇ   ಇಷ್ಟೊಂದು ದರ ವಸೂಲಿ ಮಾಡುತ್ತಿದ್ದರೂ ಈ ರೂಟಿನ ಕೆಲವೊಂದು ಬಸ್ಸಿನಲ್ಲಿ ಟಿಕೆಟ್ ಕೂಡ ಕೊಡುವುದೇ ಇಲ್ಲ  ಒಂದು ಕಡೆ ಟಿಕೆಟ್ ಕೊಡುವುದಿಲ್ಲ  ಇನ್ನೊಂದು ಕಡೆ ದರ ದುಪ್ಪಟ್ಟು ಮಾಡಿ ಪ್ರಯಾಣಿಕರೊಂದಿಗೆ ದಾದಾಗಿರಿ ಬೇರೆ ಮಾಡುತ್ತಿದ್ದಾರೆ  ಒಟ್ಟಿನಲ್ಲಿ ಖಾಸಗಿ ಬಸ್ಸುಗಳಲ್ಲಿ ಪ್ರಯಾಣವೇ ಸಾಕಾಗಿ ಹೋಗಿದೆ  ಆದ್ದರಿಂದ ಈ ರೂಟಿನಲ್ಲಿ ಐದಾರು ಸರಕಾರಿ ಸಾರಿಗೆ ಬಸ್ಸುಗಳನ್ನು ಈ ರೂಟಿಗೆ ಹಾಕಿ ಖಾಸಗಿ ಬಸ್ಸಿನವರಿಗೆ ಏರಿದ ಪಿತ್ತ ಕೆಳಗಿಳಿಸಬೇಕಾಗಿ ವಿನಂತಿ

  • ಸುಜನ್ ಕೋಟ್ಯಾನ್  ಸೂರಿಂಜೆ