ಬೈಕಿನ ಸೈಲೆನ್ಸರ್ ಬದಲಾಯಿಸಿ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಿ

ಸಾಂದರ್ಭಿಕ ಚಿತ್ರ

ದೀಪಾವಳಿ ಹಬ್ಬ  ಕ್ರಿಸ್ಮಸ್ ಹಬ್ಬ ಅಥವಾ ಇನ್ನಾವುದೇ ಶುಭ ಕಾರ್ಯ ಸಮಾರಂಭದ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವ ಆಚಾರಗಳು ನಮ್ಮಲ್ಲಿವೆ  ಪಟಾಕಿ ಸಿಡಿಸುವಾಗ ನಿಗದಿತ ಡೆಸಿಬಲ್  ಶಬ್ದ ಜಾಸ್ತಿ ಅಲ್ಲದ  ಮಿತಿಯೊಳಗೆ ಪಟಾಕಿ ಸಿಡಿಸಲು ಜಿಲ್ಲಾಡಳಿತದ ಆದೇಶವಿದೆ  ಅಂತೆಯೇ ಜಾಸ್ತಿ ಡೆಸಿಬಲ್ ಶಬ್ದವಿರುವ ಕರ್ಕಶ ಹಾರ್ನ್ ಬಸ್ ಲಾರಿಗಳಿಗೆ ಅಳವಡಿಸಬಾರದು  ಶಬ್ದ ಮಾಲಿನ್ಯ ಮಾಡಬಾರದು ಎಂಬ ಕಾನೂನು ಸಹ ರೂಢಿಯಲ್ಲಿದೆ  ಈ ಬಗ್ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಆಗಾಗ್ಗೆ ವಾಹನ ತಪಾಸಣೆ ನಡೆಸಿ  ಕರ್ಕಶ ಶಬ್ದ ಏಳಿಸುವ ಹಾರ್ನ್ ಕಿತ್ತು ವಾಹನ ಚಾಲಕರ ಮೇಲೆ ದಂಡ ವಿಧಿಸಲಾಗುತ್ತಿದೆ
ಇದೇನೋ ಸರಿ  ಆದರೆ ಜಾಸ್ತಿ ಡಿಸಿಬಲ್ ಇರುವ ಪಟಾಕಿ ಸಿಡಿಸಿದುದರ ಬಗ್ಗೆ ಕ್ರಮ ತೆಗೆದುಕೊಂಡಿರುವ ವರದಿ ಬಗ್ಗೆ ನಾನು ತಿಳಿದಿಲ್ಲ
ಆದರೆ ಇತ್ತೀಚೆಗಿನ ದಿನಗಳಲ್ಲಿ ಬುಲೆಟ್ ಬೈಕ್ ಹಾಗೂ ಇನ್ನಿತರ ಬೈಕ್ ಸೈಲೆನ್ಸರ್ ಮಾರ್ಪಡಿಸಿ ದಾರಿಯುದ್ಧಕ್ಕೂ ಬಡ ಬಡ ಶಬ್ದ  ಮಿತಿಗಿಂತಲೂ ಹೆಚ್ಚು  ಮಾಡಿ ಬೈಕ್ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಕೊಡುವ ಬೈಕ್ ಸವಾರರ ಮೇಲೆ ಕ್ರಮ ಯಾಕಿಲ್ಲ
ಮೊದಲೇ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ತನ್ಮಧ್ಯೆ ವಾಹನಗಳ ಸೈಲೆನ್ಸರ್ ತೆಗೆದು ವಾಯು ಮಾಲಿನ್ಯವನ್ನು ಕೆಡಿಸುವುದಾ   ವಾಹನಗಳ ಸೈಲೆನ್ಸರ್ ಮಾರ್ಪಾಡು ಮಾಡಿದ್ದಲ್ಲಿ ಸೈಲೆನ್ಸರ್ ಹೊರಡಿಸುವ ವಿಚಿತ್ರ ಶಬ್ದ ನಮ್ಮನ್ನು ಕಿವುಡರನ್ನಾಗಿ ಮಾಡಿ ಇದರ ಭೀಕರ ಹೊಗೆ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲವೇ   ಮೋಟಾರು ವಾಹನ ಕಾಯಿದೆ 1998ರ ಪ್ರಕಾರ ಕಂಪೆನಿ ತಯಾರಿಸಿದ ವಾಹನ ಮಾದರಿಯನ್ನು ಬದಲಾಯಿಸುವುದು ಕಾನೂನುಬಾಹಿರವಾದರೆ ಇಂತಹ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಪರಿಸರ ಮಾಲಿನ್ಯಕ್ಕೆ ತೊಂದರೆ ಮಾಡುವಂಥ ದ್ವಿಚಕ್ರ ವಾಹನ ಚಾಲಕರ ಮೇಲೆ ಸೂಕ್ಷ್ಮ ಕ್ರಮವನ್ನು ಆರ್‍ಟಿಓ ಇವರು ತೆಗೆದುಕೊಳ್ಳಬಾರದೇ

  • ಜೆ ಎಫ್ ಡಿಸೋಜ  ಅತ್ತಾವರ